ರಾಜ್ಯದ ಶೌಚಾಲಯಗಳ ಸ್ಥಿತಿ ಶೋಚನೀಯ : ಸರ್ವೆ
ಬೆಂಗಳೂರು, ಜು. 21 : ಸಾಫ್ಟ್ ವೇರ್ ಮೂಲಕ ಬೆಂಗಳೂರು ಏನೇ ಖ್ಯಾತಿ ಗಳಿಸಿದ್ದರೂ ಶೌಚಾಲಯದ ಶುಚಿತ್ವಕ್ಕೆ ಸಂಬಂಧಿಸಿದಂತೆ ರಾಜ್ಯದ ಸ್ಥಿತಿ ಚಿಂತಾಜನಕವಾಗಿದೆ. ಅರ್ಘ್ಯಂ ಸಂಸ್ಥೆಯ ನೇತೃತ್ವದಲ್ಲಿ ಹೌಸ್ ಹೋಲ್ಡ್ ವಾಟರ್ ಅಂಡ್ ಸಾನಿಟೇಷನ್ ಸರ್ವೆ (ASHWAS) ನಡೆಸಿದ ಸರ್ವೆಯಿಂದ ಇದು ಬೆಳಕಿಗೆ ಬಂದಿದೆ.
ಇನ್ಫೋಸಿಸ್ ಮಾಜಿ ಸಹಸಂಸ್ಥಾಪಕ ನಂದನ್ ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ನೇತೃತ್ವದ ಅರ್ಘ್ಯಂ ಸಂಸ್ಥೆಯಿಂದ ಈ ಸರ್ವೆ ನಡೆಸಲಾಗಿದ್ದು, ರಾಜ್ಯ ಶೇ. 80 ರಷ್ಟು ಮಂದಿ ಶೌಚಾಲಯದ ಶುಚಿತ್ವದ ಕೊರತೆಯನ್ನು ಎದುರಿಸುತ್ತಿದ್ದಾರೆ.
ರಾಜ್ಯದ 172 ತಾಲ್ಲೂಕು, 28 ಜಿಲ್ಲಾ ಕೇಂದ್ರಗಳು ಹಾಗೂ 17,200 ಗೃಹಿಣಿಗಳ ಮೂಲಕ ಈ ಸರ್ವೆ ನಡೆಸಲಾಗಿದೆ ಎಂದು ಅರ್ಘ್ಯಂ ಸಂಸ್ಥೆಯ ಮುಖ್ಯಸ್ಥೆ ರೋಹಿಣಿ ನಿಲೇಕಣಿ ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿ ಕೂಡಾ ಸರ್ವೆ ನಡೆಸಲಾಗಿದ್ದು, ಬಹುತೇಕ ಶಾಲೆಗಳು ಶೌಚಾಲಯ ಮತ್ತು ಅದರ ಶುಚಿತ್ವದ ಕೊರತೆಯನ್ನು ಎದುರಿಸುತ್ತಿವೆ ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications