ಆತ್ಮಹತ್ಯಾ ದಾಳಿ ನಡೆಸಲು ಮಕ್ಕಳ ಬಳಕೆ!
ಇಸ್ಲಾಮಾಬಾದ್, ಜೂ. 17 : ಭಯೋತ್ಪಾದಕರಿಗೆ ಸ್ವರ್ಗದಂತಾಗಿರುವ ಪಾಕಿಸ್ತಾನದಲ್ಲಿ ಭಯೋತ್ಪಾದಕರು ತಮ್ಮ ಉಗ್ರ ಕ್ರತ್ಯವನ್ನು ನಡೆಸಲು ಮಕ್ಕಳನ್ನು ಬೃಹತ್ ಮೊತ್ತ ನೀಡಿ ಖರೀದಿಸುತ್ತಿದ್ದಾರೆ ಎನ್ನುವ ಆಘಾತಕಾರಿ ವಿಷಯವನ್ನು ಪಾಕ್ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಹೇಳಿದ್ದಾರೆ.
ಭಯೋತ್ಪಾದಕರು ಮಕ್ಕಳನ್ನು ತಮ್ಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಆತ್ಮಹತ್ಯಾ ಬಾಂಬ್ ದಾಳಿ ನಡೆಸಲು ಬಳಸಿಕೊಳ್ಳುವ ಮಕ್ಕಳನ್ನು ಸುಮಾರು 5 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ದುಡ್ಡು ಕೊಟ್ಟು ಅವರ ಹೆತ್ತವರಿಂದ ಖರೀದಿಸಲಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರ ಸಂಘಟನೆಯ ಬೇರು ಸಮೇತ ಕಿತ್ತುಹಾಕುವವರೆಗೂ ಅವರ ವಿರುದ್ದ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಪೋಲಿಸ್ ಪಡೆ ಬಲವರ್ಧನೆಗೆ ಸರಕಾರ ಅಗತ ಕ್ರಮ ಕೈಗೊಳ್ಳಲಿದ್ದು, ರಾಜಧಾನಿಯಲ್ಲಿ 20 ಸಾವಿರ ಹೆಚ್ಚಿನ ಪೋಲಿಸ್ ಸಿಬ್ಬ೦ದಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ರೆಹಮಾನ್ ಮಲಿಕ್ ಹೇಳಿಕೆ ನೀಡಿದ್ದಾರೆ.
(ಏಜನ್ಸೀಸ್)











Click it and Unblock the Notifications