ರೊನಾಲ್ಡೊ ದಾಖಲೆ ಮೊತ್ತಕ್ಕೆ ಮಾರಾಟ
ಮ್ಯಾನ್
ಚೆಸ್ಟರ್, ಜೂ.11 : ಕ್ರಿಕೆಟ್ ಆಟಗಾರರನ್ನು ಕೋಟಿ ಕೋಟಿ ರು.ಗಳನ್ನು ಕೊಟ್ಟು ಕಂಪನಿಗಳು ಖರೀದಿ ಮಾಡುವುದನ್ನು ಇತ್ತೀಚಿಗೆ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ನೋಡಿದ್ದೇವೆ. ಇದನ್ನೂ ಮೀರಿಸುವಂತ ಮಾರಾಟ ಬ್ರಿಟನ್ ನಿಂದ ವರದಿಯಾಗಿದೆ. ಇಂಗ್ಲೆಂಡ್ ನ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್ ತನ್ನ ಪರವಾಗಿ ಆಡುತ್ತಿರುವ ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊನನ್ನು ಸುಮಾರು 600 ಕೋಟಿ ರೂಪಾಯಿಗಳಿಗೆ (130 ಮಿಲಿಯನ್ ಡಾಲರ್ ) ಮಾರಾಟ ಮಾಡಲು ನಿರ್ಧರಿಸಿದೆ. id="toptextpromo">ಈ
ಭಾರಿ ಮೊತ್ತದ ಹಣ ನೀಡಿ ಈ ಆಟಗಾರನನ್ನು ಖರೀದಿಸಲು ಇನ್ನೊಂದು ಫುಟ್ಬಾಲ್ ಕ್ಲಬ್ ರಿಯಲ್ ಮ್ಯಾಡ್ರಿಡ್ ಒಪ್ಪಿಕೊಂಡಿದೆ. ಯಾವುದೇ ಪೂರ್ವ ಷರತ್ತುಗಳಿಲ್ಲದೇ ರೊನಾಲ್ಡೊನನ್ನು ಮಾರಾಟ ಮಾಡಲು ಮ್ಯಾಂಚೆಸ್ಟರ್ ಯುನೈಟೆಡ್ ಒಪ್ಪಿಕೊಂಡಿದೆ ಎಂದು ರಿಯಲ್ ಮ್ಯಾಡ್ರಿಡ್ ತನ್ನ ಅಂತರ್ಜಾಲದಲ್ಲಿ ತಿಳಿಸಿದೆ. ಈ ಸಂಬಂಧದ ಎಲ್ಲ ಪ್ರಕ್ರಿಯೆಗಳು ಈ ತಿಂಗಳ 30ನೇ ತಾರೀಕಿನ ಒಳಗೆ ಮುಗಿಯಲಿದ್ದು, ಆನಂತರ ಇದನ್ನೂ ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂದು ರಿಯಲ್ ಮ್ಯಾಡ್ರಿಡ್ ಕ್ಲಬ್ ಹೇಳಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications