ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜ ಸುಧಾರಕರು ಒಂದೇ ಜಾತಿಗೆ ಸೀಮಿತವಲ್ಲ

By Staff
|
Google Oneindia Kannada News

ಮೈಸೂರು, ಜೂ. 11: ಇಂದು ಸಮಾಜದಲ್ಲಿ ಕನಕದಾಸರು, ಅಂಬೇಡ್ಕರ್, ಬಸವಣ್ಣ, ಶಂಕರಾಚಾರ್ಯರಂತಹ ಸಮಾಜ ಸುಧಾರಕರನ್ನು ನಿರ್ಧಿಷ್ಟ ಕೋಮುಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇಂತಹ ತಪ್ಪುಗಳನ್ನು ಹೋಗಲಾಡಿಸಿ ಅವರುಗಳು ನೀಡಿದ ತತ್ವಗಳನ್ನು ಇಡೀ ಸಮಾಜದ ಏಳಿಗೆಗೆ ಬಳಸಬೇಕು ಎಂದು ರಾಜ್ಯ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ತಿಳಿಸಿದರು.

ಅವರು ಬುಧವಾರ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳ ಆಶ್ರಮದಲ್ಲಿ 'ದಲಿತ ಪೌರ ಕಾರ್ಮಿಕರ ಸಮ್ಮೇಳನ' ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಮಾಜಿಕ ಪರಿವರ್ತನೆ ಇಂದು ಅತ್ಯಗತ್ಯವಾಗಿದೆ. ಜಾತಿ ಹೆಸರಿನಲ್ಲಿ ಸಮಾಜವನ್ನು ಛಿದ್ರಗೊಳಿಸಲಾಗುತ್ತಿದೆ. ಭಾರತೀಯ ಸಮಾಜ ವಿಶ್ವಕ್ಕೆ ಮಾದರಿಯಾಗುವ ತತ್ವ ಸಂಸ್ಕೃತಿ ಹೊಂದಿದೆ. ಎಲ್ಲ ಸ್ವಾಮೀಜಿಗಳು ಪ್ರಯತ್ನ ನಡೆಸಿದರೆ ಹಿಂದೂ ಸಮಾಜ ಒಂದಾಗಿ ದೇಶವನ್ನು ಪೂರ್ಣ ಯಶಸ್ಸಿನೆಡೆಗೆ ಕೊಂಡೊಯ್ಯಲು ಸಾಧ್ಯ ಎಂದು ಸಚಿವ ಈಶ್ವರಪ್ಪ ಹೇಳಿದರು.

ಸಮಾರಂಭದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಪಿ ಎಂ ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಎಸ್ ಎ. ರಾಮದಾಸ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್, ಚೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರಮೇಶ್, ಮಾಜಿ ಮೇಯರ್ ನಾರಾಯಣ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದು , ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮಿಗಳು ಉಪಸ್ಥಿತರಿದ್ದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X