ಅ.ರಾ.ಮಿತ್ರಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೆಂಗಳೂರು, ಜೂ.6: ಪ್ರೊ.ಅ.ರಾ. ಮಿತ್ರ, ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ. ಮಲ್ಲಿಕಾರ್ಜುನಹಿರೇಮಠ ಹಾಗೂ ಲಕ್ಷ್ಮಣ ಅವರನ್ನು 2008ನೇಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ 10 ಸಾವಿರ ರೂ.ನಗದು ಬಹುಮಾನ ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಪತ್ರಿಕಾಗೋಷ್ಠಿಯಲ್ಲಿಶುಕ್ರವಾರ ತಿಳಿಸಿದರು.ಪ್ರೊ.ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರವಿಮರ್ಶಕರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರಕೊಡುಗೆ ನೀಡಿದ್ದಾರೆ. 73ವರ್ಷದಬಾಗಲಕೋಟ ಬೀಳಗಿಯ ಹಸನಬಿ, ವಚನಮತ್ತು ಜಾನಪದ ಸಾಹಿತ್ಯಕ್ಕೆ ಗಮನಾರ್ಹ ಸೇವೆ
ಸಲ್ಲಿಸಿದ್ದಾರೆ. ಅಂಕೋಲಾದ ಕುಗ್ರಾಮದನಿರ್ಲಕ್ಷಿತ ಸಮುದಾಯದ ವಿಷ್ಣು ನಾಯ್ಕ,ನಾಟಕ, ವಿಮರ್ಶೆ, ಅಂಕಣ, ಕಥೆ, ಸಂಪಾದನೆಸೇರಿದಂತೆ 35 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ.

ಕೊಪ್ಪಳ ಜಿಲ್ಲೆ ಬಿಸನಳ್ಳಿಯ ಪ್ರೊ. ಮಲ್ಲಿಕಾರ್ಜುನಹಿರೇಮಠ,ಲಂಬಾಣಿ ಜನಾಂಗದ ಜೀವನಮತ್ತು ಸಂಸ್ಕೃತಿ ಕುರಿತ ಅಪರೂಪದಕಾದಂಬರಿ 'ಹವನ"ದ ಜತೆಗೆ ಪ್ರವಾಸಕಥನ,ಕಾವ್ಯವನ್ನೂ ರಚಿಸಿದ್ದಾರೆ. ಕನಕಪುರತಾಲೂಕಿನ ಲಕ್ಷ್ಮಣ,ಕಾವ್ಯ, ಕಥೆಗಳ ಮೂಲಕಸಾಹಿತ್ಯಾಸಕ್ತರ ಗಮನಸೆಳೆದವರು. ಈಹಿನ್ನೆಲೆಯಲ್ಲಿ ಐವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿಯ 2007ನೇ ಸಾಲಿನ 'ಪುಸ್ತಕಬಹುಮಾನ"ಕ್ಕೆ 18 ಲೇಖಕರ ಕೃತಿಗಳನ್ನು ಆಯ್ಕೆಮಾಡಲಾಗಿದೆ. ಈ ಪ್ರಶಸ್ತಿಗಳು ತಲಾ ಐದುಸಾವಿರ ರೂ. ನಗದು ಬಹುಮಾನಒಳಗೊಂಡಿವೆ. ಪ್ರಶಸ್ತಿ ಪ್ರದಾನ ಸಮಾರಂಭವುಜುಲೈ ಕೊನೆ ವಾರ ಜಮಖಂಡಿಯಲ್ಲಿ ನಡೆಯಲಿದೆ.

ಬಹುಮಾನದ ವಿವರಗಳು:
ಬಸವರಾಜ ವಕ್ಕುಂದ-'ಒಡೆಯಲಾರದಪ್ರತಿಮೆ". ನೇಮಿಚಂದ್ರ-'ಯಾದ್ ವಶೇಮ್".ಮುಹಮ್ಮದ್ ಕುಳಾಯಿ-'ನನ್ನ ಇನ್ನಷ್ಟುಕತೆಗಳು". ಎಸ್.ಜಿ. ಸಿದ್ದರಾಮಯ್ಯ-'ದಾಳ". ಎಚ್.ಎಲ್. ಕೇಶವಮೂರ್ತಿ-'ದೇವರುಗಳ ಟೈಮೇ ಸರಿ ಇಲ್ಲ". ಸಂಗಮೇಶಕೋಟಿ- 'ದುಬೈ ಎಂಬ ಮಾಯಾನಗರಿ".ಗಣೇಶ ಅಮೀನಗಡ-'ಬಣ್ಣದ ಬದುಕಿನಚಿನ್ನದ ದಿನಗಳು". ಕೆ.ವಿ. ತಿರುಮಲೇಶ್ 'ಉಲ್ಲೇಖ". ಪ್ರೊ.ಎಸ್. ಉಮಾಪತಿ-'ನಂದಪ್ಪ ದೇವರ ಪ್ರಭು ಚರಿತ್ರೆ". ನಾ.ಸು.ಭರತನಹಳ್ಳಿ-'ರೊಬೋಟೋ ಮತ್ತುಚಿಹ್ನೆಗಳು". ನಾಗೇಶ ಹೆಗಡೆ-'ಆಚಿನಲೋಕಕ್ಕೆಕಾಲಕೋಶ". ಹಾಲತಿಸೋಮಶೇಖರ್-'ಮಹಿಳಾ ಚಳವಳಿಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ". ಷ.ಶೆಟ್ಟರ್-'ಶಂಗಂ ತಮಿಳಗಂ ಮತ್ತು ಕನ್ನಡನಾಡು ನುಡಿ". ಚಂದ್ರಕಾಂತಪೋಕಳೆ-'ನೆಲವೆದ್ದು ಬಡಿಯಿತು". ಪಿ.ವಿ.ನಾರಾಯಣ-'ಅಧಿಕಾರ ಮೀಮಾಂಸೆ".ಸಿ.ಎಚ್. ಹನುಮಂತರಾಯ-'ವಕೀಲರೊಬ್ಬರ ವಗೈರೆಗಳು". ಬಸವರಾಜ ಹೂಗಾರ'ತತ್ರಾಣಿ"ಹಾಗೂ ಕನ್ನಡದಿಂದ ಇಂಗ್ಲಿಷ್‌ಗೆಅನುವಾದಗೊಂಡ ಡಾ.ಐ. ಅಂತಪ್ಪ ಅವರ'ಆರಿಜಿನ್ ಆಫ್ ಕ್ರಿಶ್ಚಿಯಾನಿಟಿ ಇನ್ಆಂಡ್ ಅರೌಂಡ್ ಶ್ರೀರಂಗಪಟ್ಟಣ.

(ಸ್ನೇಹಸೇತು:ವಿಜಯ ಕರ್ನಾಟಕ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+