ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಾಗರಹೊಳೆಯಲ್ಲಿ ಹೆಣ್ಣು ಹುಲಿ ಮರಣ
ತಕ್ಷಣ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ವಲಯ ಅರಣ್ಯಾಧಿಕಾರಿಗಳ ಜೊತೆ ಸ್ಥಳಕ್ಕೆ ತೆರಳಿ ಹುಲಿಯ ಶವವನ್ನು ಪರಿಶೀಲಿಸಲಾಗಿ, ಹುಲಿಯ ದೇಹದ ಮೇಲೆ ಯಾವುದೇ ರೀತಿಯಾದ ಗಾಯಗಳು ಕಂಡುಬಂದಿರುವುದಿಲ್ಲ. ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಶವಪರೀಕ್ಷೆಯನ್ನು ನಡೆಸಲಾಗಿದ್ದು ಅಂದಾಜು ಹುಲಿಯ ವಯಸ್ಸು 12 ವರ್ಷಗಳಾಗಿರುತ್ತದೆ ಎಂದು ಹುಣಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ,ಡಿ. ಯತೀಶ್ ಕುಮಾರ್ ತಿಳಿಸಿದರು.
*****
ದತ್ತು
ಸ್ವೀಕಾರ
ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಬೆಂಗಳೂರಿನ ಶ್ರೀನಿವಾಸರಾವ್ ಕಸ್ಬೆಯವರಯ ಒಂದು ಲವ್ಬರ್ಡ್ ಹಾಗೂ ಮೈಸೂರಿನ ಎಂ ಶಮಂತ ಅವರು ಒಂದು ಮೊಸಳೆಯನ್ನು ದತ್ತುವಾಗಿ ಪಡೆದಿದ್ದಾರೆ ಎಂದು ಮೃಗಾಲಯದ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)
Comments
mysuru zoo wild animal ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ಅರಣ್ಯಾಧಿಕಾರಿ ಹುಣಸೂರು tigress nagarahole national park forest officer
Story first published: Friday, June 5, 2009, 18:37 [IST]