ಜಪಾನ್ ಮೇಲೆ ಅಣು ಬಾಂಬ್ ಎಸೆದ ಪೈಲೆಟ್ ಸಾವು
ಲಂಡನ್,
ಜೂ. 5 : ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಜಪಾನ್ ನ ನಾಗಾಸಾಕಿ ನಗರದ ಮೇಲೆ ಪರಮಾಣು ಬಾಂಬ್ ಎಸೆದಿದ್ದ ವಿಮಾನದ ಸಹ ಪೈಲೆಟ್ ಆಗಿದ್ದ ಚಾರ್ಲ್ಸ್ ಡೊನಾಲ್ಡ್ ಅಲ್ಬುರಿ (88) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. id="toptextpromo">1945,
ಅಗಸ್ಟ್ 9 ರಂದು ನಡೆದ ಎರಡನೇ ಮಹಾಯುದ್ಧದಲ್ಲಿ ಬಿ-29 ಬೂಕ್ಸ್ ಸ್ಕೇರ್ ಎಂಬ ವಿಮಾನಕ್ಕೆ ಕರ್ನಲ್ ಪಾಲ್ ಟಿಬ್ಬೆಟ್ಸ್ ಜೂನಿಯರ್ ಎಂಬುವವರು ಪೈಲೆಟ್ ಆಗಿದ್ದರೆ, ಚಾರ್ಲ್ಸ್ ಡೊನಾಲ್ಡ್ ಅಲ್ಬುರಿ ಸಹಪೈಲೆಟ್ ಆಗಿದ್ದರು. ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಸುಮಾರು 10200 ಟನ್ ಅಣು ಬಾಂಬ್ ಎಸೆಯಲು ಈ ಇಬ್ಬರು ಪ್ರಮುಖರು ಎನ್ನಲಾಗಿತ್ತು. ಟಿಬ್ಬೆಟ್ಸ್ ಈಗಾಗಲೇ ಮರಣ ಹೊಂದಿದ್ದಾರೆ. ಗುರುವಾರ ಅಲ್ಬುರಿ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅಮೆರಿಕ ನಡೆಸಿದ ಎರಡನೇ ಮಹಾಯುದ್ಧದಲ್ಲಿ ಸುಮಾರು 40 ಸಾವಿರ ಅಮಾಯಕರು ಸಾವನ್ನಪ್ಪಿದ್ದರು. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications