ದಾವೂದ್ ತಮ್ಮ ಅನೀಸ್ ಮೇಲೆ ಗುಂಡಿನ ದಾಳಿ

Anees ibrahim
ಕರಾಚಿ, ಜೂ. 5 : ಭಾರತಕ್ಕೆ ಬೇಕಿರುವ ಮೋಸ್ಟ್ ವಾಟೆಂಡ್ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಅನೀಸ್ ಇಬ್ರಾಹಿಂ ಮೇಲೆ ಅಪರಿಚಿತ ವ್ಯಕ್ತಿಗಳು ಕರಾಚಿಯ ಅಲ್ ಹಬೀಬ್ ಬ್ಯಾಂಕ್ ಬಳಿ ಗುಂಡು ಹಾರಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅನೀಸ್ ತೀವ್ರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಮಾಹಿತಿಗಳ ಪ್ರಕಾರ, ಅನೀಸ್ ಮೇಲೆ ಅಪರಿಚಿತರು ಸುಮಾರು 12 ಹೆಚ್ಚು ಗುಂಡುಗಳನ್ನು ಹಾರಿಸಿದ್ದಾರೆ. ಡಿ ಕಂಪನಿ ಹೆಸರಿನಲ್ಲಿ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗುವಲ್ಲಿ ಅನೀಸ್ ಪ್ರಮುಖ ಪಾತ್ರವಹಿಸಿದ್ದು, ಭಾರತದ ವಿವಿಧ ನಗರಗಳ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಬಲೂಚಿಸ್ತಾನದ ಮಾಫಿಯಾ ಗ್ಯಾಂಗ್ ಅನೀಸ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಎಂದು ಶಂಕಿಸಲಾಗಿದೆ. ಅನೀಸ್ ನನ್ನು ಕರಾಚಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದ್ದು, ದೇಹ ಸ್ಥಿತಿ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. 1993 ರಲ್ಲಿ ಭಾರತದಲ್ಲಿ ಮುಂಬೈಯಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪ್ರಮುಖ ಪಾತ್ರವನ್ನು ದಾವೂದ್ ಇಬ್ರಾಹಿಂ ಮತ್ತು ಅನೀಸ್ ಇಬ್ರಾಹಿಂ ವಹಿಸಿದ್ದರು.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+