ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಟಿಒ ಕಚೇರಿಗಳ ಗಣಕೀಕರಣ : ಆರ್ ಅಶೋಕ್

By Staff
|
Google Oneindia Kannada News

R Ashoka
ಮೈಸೂರು, ಜೂ.4 : ರಾಜ್ಯದ ಎಲ್ಲಾ ಜಿಲ್ಲೆಗಳ ಆರ್ ಟಿ . ಕಚೇರಿಗಳನ್ನು ಸದದಲ್ಲೇ ಗಣಕೀಕರಣಗೊಳಿಸಲಾಗುವುದೆಂದು ಸಾರಿಗೆ ಸಚಿವ ಆರ್ ಅಶೋಕ್ ಅವರು ತಿಳಿಸಿದರು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮೈಸೂರು ನಗರಸಾರಿಗೆ ವಿಭಾಗ, ಮೈಸೂರು ಇವರ ವತಿಯಿಂದ ಸಾತಗಳ್ಳಿಯಲ್ಲಿ ನಿರ್ಮಿಸಲಾಗಿರುವ ನೂತನ ಬಸ್ ಘಟಕದ ಉದ್ಘಾಟನೆಯನ್ನು ಬುಧವಾರದಂದು ನೆರವೇರಿಸಿ ಮಾತನಾಡುತ್ತಿದ್ದರು. ಜನರಿಗೆ ಇಲಾಖೆ ಮಾಹಿತಿಯು ಶೀಘ್ರ ಲಭ್ಯವಾಗಬೇಕೆಂಬ ದೃಷ್ಟಿಯಿಂದ ಗಣಕೀಕರಣಗೊಳಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಎಲ್ಲಾ ಆರ್ ಟಿಒ ಕಚೇರಿಗಳಲ್ಲೂ ಇನ್ನು ಹತ್ತು ದಿನದೊಳಗೆ ವಾಹನಗಳಿಗೆ ಆರ್ ಸಿ. ಬುಕ್ ಬದಲು ಸ್ಮಾರ್ಟ್ ಕಾರ್ಡ್ ನೀಡಲಾಗುವುದು. ಇದರಲ್ಲಿ ಎಲ್ಲಾ ಮಾಹಿತಿಯು ಭ್ಯವಿರುವುದು. ಇನ್ನುಮುಂದೆ ವೆಬ್‌ಸೈಟ್ ಮುಖಾಂತರವೇ ವಾಹನ ಚಾಲನಾ ಪರವಾನಗಿ ಮಾಹಿತಿಯನ್ನು ಪಡೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಸಾರಿಗೆ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಡಿ ನಗರದ ಏಳು ಬಸ್ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ದೃಷ್ಠಿಯಿಂದ , ಅಂದಾಜು 108.59 ಕೋಟಿ ರು.ಗಳ ಕಾಮಗಾರಿ ಕೆಲಸವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರವು ಶೇ. 80 ಭಾಗ, ರಾಜ್ಯ ಸರ್ಕಾರವು ಶೇ.10 ಭಾಗವನ್ನು ನೀಡುವುದು. ಉಳಿದ ಶೇ. 10ರಷ್ಟು ಭಾಗವನ್ನು ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಭರಿಸಲಾಗುವುದೆಂದು ತಿಳಿಸಿದ ಅವರು ಎಲ್ಲಾ ಏಳು ಬಸ್ ನಿಲ್ದಾಣಗಳ ಕಾಮಗಾರಿ ಕೆಲಸವನ್ನು ಜುಲೈ 2010ರೊಳಗೆ ಪೂರ್ಣಗೊಳಿಸಲಾಗುವುದೆಂದು ಹೇಳಿದರು.

ಪ್ರಯಾಣಿಕರ ಸೌಲಭ್ಯಕ್ಕಾಗಿ 20 ವೋಲ್ವೋ, 41 ಸೆಮಿ ಲೋಫ್ಲೋರ್, 50 ಮೀಡಿಯಂ ಲೋಫ್ಲೋರ್ ವಾಹನಗಳನ್ನು ನರ್ಮ್ ಯೋಜನೆಯಡಿಯಲ್ಲಿ 111 ನೂತನ ಮಾದರಿಯ ನಗರ ಸಾರಿಗೆ ವಾಹನಗಳನ್ನು ನಗರದ ಎಲ್ಲಾ ಬಡಾವಣೆಗಳಿಗೆ ಹಾಗೂ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಹಂತಹಂತವಾಗಿ ಬಿಡಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ತನ್ವೀರ್ ಸೇಠ್ ಅವರು ಬೆಂಗಳೂರು ನಗರದಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿರುವಂತೆ ಮೈಸೂರು ನಗರ ಹಾಗೂ ಗ್ರಾಮಾಂತರ ವಿದ್ಯಾರ್ಥಿಗಳಿಗೂ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು. ಸಮಾರಂಭದಲ್ಲಿ ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಪುರುಷೋತ್ತಮ್, ಮೈಸೂರು ಜಿಲ್ಲಾ ಪಂಚಾಯ್ತಿ ಹಂಗಾಮಿ ಅಧ್ಯಕ್ಷರಾದ ಸಿದ್ದಪ್ಪ , ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ, ಶಾಸಕ ಸಾ ರಾ ಮಹೇಶ್, ವಿಧಾನ ಪರಿಷತ್ ಸದಸ್ಯರಾದ ಕೆ ಟಿ ಶ್ರೀಕಂಠೇಗೌಡ, ತೋಂಟದಾರ್ಯ ಮುಂತಾದವರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X