35082ಕಾಫಿ ಮಾಡುವ ವಿಧಾನದಲ್ಲೂ ಅದೆಷ್ಟು ಬಗೆ!/recipe/drinks/2008/0905-how-to-make-good-coffee.htmlಕಾಫಿ ತಯಾರಿಕೆಯಲ್ಲಿ ಹಲವು ವಿಧಾನಗಳಿವೆ, ಪದ್ಧತಿಗಳಿವೆ. ಬಟ್ಟೆಯಲ್ಲಿ ಕಾಫಿ ಸೋಸುವ ಸಾಂಪ್ರದಾಯಿಕ ವಿಧಾನ, ಪರ್ಕ್ಯೂಲೇಟರ್‌ ವಿಧಾನ, ಫಿಲ್ಟರ್‌ ವಿಧಾನ, ಕುದಿಸಿ ತಯಾರಿಸುವ ವಿಧಾನ ಇತ್ಯಾದಿ, ಇತ್ಯಾದಿ..ಈಗ ಒಂದೊಂದು ವಿಧಾನವನ್ನು ಪ್ರಯತ್ನಿಸೋಣ. ಬಟ್ಟೆಯಲ್ಲಿ ಕಾಫಿ ಸೋಸುವ ವಿಧಾನ : ಮೊದಲು ನೀರನ್ನು ಹಿಡಿ ಮೂತಿ ಇರುವ ಪಾತ್ರೆಯಲ್ಲಿ ಕುದಿಸಿ, ಕಾಫಿ ಸೋಸಲೆಂದೇ ಇರುವ ಶುಭ್ರಬಟ್ಟೆಯನ್ನು ಖಾಲಿ ಪಾತ್ರೆಯ ಮೇಲೆ 977http://kannada.oneindia.com/img/2009/10/29-filter-coffee1.jpg35082ಮಸಾಲಾ ಬಾದಾಮಿ ಇಡ್ಲಿ/recipe/breakfast/2007/1112-recipe-masala-badam-idli.htmlಅದೇ ಇಡ್ಲಿ ಅದೇ ಸಾಂಬಾರ್ ಬೇಡ. ಇಡ್ಲಿಯಲ್ಲೂ ಬಾಯಲ್ಲಿ ನೀರೂರಿಸುವ ಪಾಕ ಪ್ರಾವಿಣ್ಯವನ್ನು ಪ್ರದರ್ಶಿಸಬಹುದು. ಅದೇ ಮಸಾಲಾ ಬಾದಾಮಿ ಇಡ್ಲಿ. ಹಾಗಿದ್ದರೆ ಈ ಹೊಸ ಪಾಕವನ್ನೊಮ್ಮೆ ಪ್ರಯತ್ನಿಸಿ ನೋಡಿ. ಕುಸುಮಬಾಲೆ ಬೇಕಾಗುವ ಪದಾರ್ಥಗಳು : ಅಕ್ಕಿ : 200 ಗ್ರಾಂ ಕಡಲೆ ಬೇಳೆ : 100ಗ್ರಾಂ ಬಾದಾಮಿ ಹೋಳುಗಳು : 100ಗ್ರಾಂ ಹಸಿ ಮೆಣಸಿನ ಕಾಯಿ : 19453http://kannada.oneindia.com/img/2009/10/13-masala-badam-idli2.jpg35082ಆಟೋ ಬೆನ್ನುಡಿ ಸಾಹಿತ್ಯಕ್ಕೆ ಜಯವಾಗಲಿ/literature/articles/2008/1117-heart-warming-autorikshaw-slogans.htmlಆಟೋಗಳ ಹಿಂಬಾಗ ಅದೆಷ್ಟೋ ಕ್ರಿಯೇಟಿವ್ ಬರಹಗಳಿಗೆ, ಸಿನೇಮಾ ಜಾಹೀರಾತುಗಳಿಗೆ, ಗ್ರಾಹಕ ವಸ್ತುಗಳ ಜಾಹೀರಾತುಗಳಿಗೆ (ಎಫ್.ಎಂ.ಸಿ.ಜಿ ಪ್ರಾಡಕ್ಸ್) ವೇದಿಕೆಯಾಗಿರುತ್ತದೆ. ಅಲ್ಲದೆ, ಆಟೋ ಚಾಲಕರ ಅಭಿರುಚಿಗೆ ಅನುಗುಣವಾಗಿ ಹಿಂಬರಹಗಳು ಪ್ರತಿನಿತ್ಯ ನಮ್ಮ ಗಮನ ಸೆಳೆಯುತ್ತಲೇ ಇರುತ್ತವೆ. ಇಂಥ ಎಷ್ಟೋ ಆಟೋ ಸಂದೇಶಗಳನ್ನು ನೀವು ನೋಡಿರಲಿಕ್ಕೆ ಸಾಕು. ನನ್ನ ಕಣ್ಣಿಗೆ ಬಿದ್ದ ಕೆಲವನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.*ಸುಧೀಂದ್ರ ಎಸ್ ರಾವ್, ಬೆಂಗಳೂರು ಟಿ 32811http://kannada.oneindia.com/img/2009/08/01-sudheendra-deshpande1e.jpg35082ಯೋಗಿನಿ ಮಲ್ಲಿಕಾ ಹಾಗೂ ಯೇಸುಕ್ರಿಸ್ತನ ಕಥೆ/movies/bollywood/2008/12/04-mallika-sherawat-role-hollywood-film-on-christ.htmlಅಪ್ಪಟ ಬ್ರಹ್ಮಚಾರಿಣಿಯ ಪಾತ್ರವನ್ನು ಮಲ್ಲಿಕಾ ಮಾಡುತ್ತಿದ್ದಾರೆ ಎಂದರೆ ಊಹಿಸುವುದಕ್ಕೂ ಸಾಧ್ಯವಿಲ್ಲ ಬಿಡಿ. ಆದರೆ ಇದು ನಿಜ. ಅದರಲ್ಲೂ ಯೇಸುಕ್ರಿಸ್ತನ ಜೀವನ ಕುರಿತಾದ ಹಾಲಿವುಡ್ ಚಿತ್ರವೊಂದರಲ್ಲಿ ಮಲ್ಲಿಕಾ ಇಂಥದೊಂದು ಪಾತ್ರದಲ್ಲಿ ಕಾಣಿಸಲಿದ್ದಾರೆ. ದಿ ಆಕ್ವೇರಿಯನ್ ಗಾಸ್ಪೆಲ್ ಎಂಬ ಅಮೆರಿಕನ್ ಚಿತ್ರದಲ್ಲಿ ಸರಸ್ವತಿ ಎಂಬ ಯೋಗಿನಿಯ ಪಾತ್ರ ಬರುತ್ತದೆ. ಜೆಸೋವ(ಯೇಸು)ನ ಆಪ್ತ ಮಿತ್ರವಲಯದಲ್ಲಿ ಪ್ರಮುಖವಾದ ವ್ಯಕ್ತಿ ಸರಸ್ವತಿ. ಈ ಚಿತ್ರದಲ್ಲಿ 33188http://kannada.oneindia.com/img/2008/12/mallika-sherawat.jpg35082ಸಂಭಾವನೆ ಇಳಿಸಿಕೊಂಡ ಸಂಜಯ್ ದತ್/movies/bollywood/2008/12/11-actor-sanjay-dutt-lowers-his-remuneration.html''ಅಗತ್ಯ ಬಿದ್ದರೆ ಅತ್ಯಧಿಕ ಸಂಭಾವನೆ ಪಡೆಯುವುದಷ್ಟೆ ಅಲ್ಲ, ಪರಿಸ್ಥಿತಿ ನೆಟ್ಟಗಿಲ್ಲದಿದ್ದರೆ ಅಷ್ಟೆ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ'' ಎನ್ನುತ್ತಿದ್ದಾರೆ ಬಾಲಿವುಡ್ 'ಖಳ್ ನಾಯಕ್ "ಸಂಜಯ್ ದತ್. ಈ ಹಿಂದೆ ಸಂಜಯ್ ದತ್ ಒಂದೊಂದು ಸಿನಿಮಾಗೆ ಮುಲಾಜಿಲ್ಲದೆ ರು.12 ಕೋಟಿ ಸಂಭಾವನೆ ವಸೂಲಿ ಮಾಡುತ್ತಿದ್ದರು. ತೀರಾ ಇತ್ತೀಚೆಗೆ ಸುನಿಲ್ ಶೆಟ್ಟಿ ಆ ಮೊತ್ತ್ತವನ್ನು 15 33382http://kannada.oneindia.com/img/2008/12/sanjay-dutt5.jpgnews"> ಫ್ರಾನ್ಸ್ ವಿಮಾನ ದುರಂತ:228 ಜನ ನೀರು ಪಾಲು | Air France | Atlantic Ocean | Rio de Janerio | Brazil | Paris | Air tragedy| ಫ್ರಾನ್ಸ್ ವಿಮಾನ ದುರಂತ:228 ಜನ ನೀರು ಪಾಲು - Kannada Oneindia

ಫ್ರಾನ್ಸ್ ವಿಮಾನ ದುರಂತ:228 ಜನ ನೀರು ಪಾಲು

Air France
ರಿಯೋ ಡಿ ಜನೈರೋ, ಜೂ.2: ಅತ್ಯಂತ ಭೀಕರ ದುರಂತವನ್ನು ಬ್ರೆಜಿಲ್ ಕಂಡಿದೆ. ಬ್ರೆಜಿಲ್ ನಿಂದ ಫ್ರಾನ್ಸ್ ಗೆ ತೆರಳುತ್ತಿದ್ದ ಏರ್ ಫ್ರಾನ್ಸ್ ವಿಮಾನ ಆಗಸದಿಂದ ಪತನಗೊಂಡಿದ್ದು, ಅದರಲ್ಲಿದ್ದ 216 ಪ್ರಯಾಣಿಕರು, 12 ಮಂದಿ ಸಿಬ್ಬಂದಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಿಡಿಲು, ಮಿಂಚಿನ ಹೊಡೆತಕ್ಕೆ ಸಿಕ್ಕ ವಿಮಾನದಲ್ಲಿ ವಿದ್ಯುತ್ ವೈಫಲ್ಯ ಉಂಟಾಗಿ ವಿಮಾನದ ಯಂತ್ರಗಳು ನಿಷ್ಕ್ರಿಯಗೊಂಡಿರಬಹುದು ಎಂದು ಶಂಕಿಸಲಾಗಿದೆ. ಅಟ್ಲಾಂಟಿಕ್ ಸಾಗರಕ್ಕೆ ವಿಮಾನ ಬಿದ್ದಿರುವ ಸಾಧ್ಯತೆಯನ್ನು ಖಚಿತಪಡಿಸಲಾಗಿದೆ. ಕೊರೆವ ಚಳಿಗೆ ಪಯಣಿಗರು ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಬ್ರೆಜಿಲ್ ಸೇನೆ ಹೇಳಿದೆ. ಶೋಧ ಕಾರ್ಯ ಮುಂದುವರೆದಿದೆ.

ಬ್ರೆಜಿಲ್ ನ ರಿಯೋ ಡಿ ಜನೈರೋ ವಿಮಾನ ನಿಲ್ದಾಣದಿಂದ ಭಾನುವಾರ ಸಂಜೆ 7 ಗಂಟೆಗೆ (ಸ್ಥಳೀಯ ಕಾಲಮಾನ)ಹೊರಟ ಏರ್ ಬಸ್ ಎ -330 ವಿಮಾನ ಅಟ್ಲಾಂಟಿಕ್ ಸಾಗರದ ಮೇಲೆ ಹಾರಾಡುವಾಗ ವಾಯು ಸಂಚಾರ ನಿಯಂತ್ರಣ(ATC) ಕಚೇರಿಯ ಸಂಪರ್ಕ ಕಳೆದುಕೊಂಡಿತು. ಸ್ಪೇನ್, ಮೊರಾಕೋ ಹಾಗೂ ಫ್ರಾನ್ಸ್ ದೇಶದ ರೇಡಾರ್ ಕಣ್ಣಿಗೆ ಕಾಣದಂತೆ ಕಣ್ಮರೆಯಾದ ವಿಮಾನ ಭಾರಿ ಅನಾಹುತಕ್ಕೆ ನಾಂದಿ ಹಾಡಿತು ಎಂದು ಫ್ರಾನ್ಸ್ ಸಚಿವ ಲೂಯಿಸ್ ಬೋರ್ಡೂ ಹೇಳಿದ್ದಾರೆ.

ವಿಮಾನದ ಅವಶೇಷಗಳು ಮತ್ತು ಪ್ರಯಾಣಿಕರ ಶವಗಳಿಗಾಗಿ ದಕ್ಷಿಣ ಅಟ್ಲಾ೦ಟಿಕ ಸಾಗರದಲ್ಲಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಪ್ರಯಾಣ ಆರಂಭಿಸಿದ ವಿಮಾನ ನಾಲ್ಕು ಗಂಟೆಗಳ ಹಾರಾಟದ ಬಳಿಕ ಅಟ್ಲಾ೦ಟಿಕ ಸಾಗರದ ಮೇಲೆ ಹಾರುತ್ತಿದ್ದಾಗ ಅದಕ್ಕೆ ಸಿಡಿಲು ಬಡಿದಿರುವ ಶಂಕೆಯಿದೆ.

ದುರಂತಕ್ಕೀಡಾದ ವಿಮಾನದಲ್ಲಿದ್ದ 216 ಪ್ರಯಾಣಿಕರ ಪೈಕಿ 126 ಪುರುಷರು, 82 ಮಹಿಳೆಯರು, 7 ಮಕ್ಕಳು ಒಂದು ಹಸುಗೂಸು ಇತ್ತು . ಬಹುತೇಕ ಪ್ರಯಾಣಿಕರು ಬ್ರೆಜಿಲ್ ನವರು, ಉಳಿದಂತೆ ಫ್ರಾನ್ಸ್, ಜರ್ಮನಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+