191713fm channelನೆನಪಿನ ತರಂಗಾಂತರಗಳು!/nri/article/2009/0121-a-walk-down-radio-memory-lane.htmlರೇಡಿಯೋ ಎಂದಾಕ್ಷಣ ಹಿಂದಿನ ಪೀಳಿಗೆಯ ಮಂದಿಯ ಕಂಗಳು ಅರಳಿ ಇಷ್ಟಗಲವಾಗುತ್ತವೆ. ರೇಡಿಯೋ ಶಬ್ದವೊಂದೇ ಸಾಕು ತರಂಗಾತರಗಳ ಅಲೆಅಲೆಯ ಮೇಲೆ ತೇಲಿಸಿಕೊಂಡು ಹೋಗಿ ಹಳೆಯ ನೆನಪುಗಳ ಲೋಕಕ್ಕೆ ಕರೆದೊಯ್ಯಲು. ಎಫ್ಎಂ, ಟೀವಿ ಇಲ್ಲದ ಕಾಲದಲ್ಲಿ ಎಲ್ಲರ ಅಚ್ಚುಮೆಚ್ಚಿನ ಸಂಗಾತಿಯಾಗಿದ್ದ ಆ ಪೆಟ್ಟಿಗೆ ನಿಮ್ಮ ಅಟ್ಟದ ಮೇಲಿದ್ದರೆ ಥಟ್ಟನೆ ಒಮ್ಮೆ ಹೋಗಿ ನೋಡಿ, ನೆನಪುಗಳ ತರಂಗಗಳು ಏಳದಿದ್ದರೆ ಕೇಳಿ!* ಗಿರೀಶ್ 34201http://kannada.oneindia.com/img/2009/01/21-radio1.jpg191713fm channelಅಮೇರಿಕದ ಬಾನುಲಿಯಲ್ಲಿ "ದುಡ್ಡೇ ದೊಡ್ಡಪ್ಪ"/nri/engagements/2009/0330-money-economy-kannada-program-us-fm-channel.htmlಇಂದಿನ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಯಾವ ರೀತಿ ತಟ್ಟಿದೆ? ವಿರೋಧಿ ನಾಮ ಸಂವತ್ಸರವು ನಿಮ್ಮ ಪಾಲಿಗೆ ಸಿಹಿ ತರುವುದೊ ಅಥವ ಕಹಿಯೆ ಹೆಚ್ಚಾಗಿ ತರುವುದೊ? ಈ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ವಿಶ್ವಕನ್ನಡಿಗರೊಂದಿಗೆ ಹಂಚಿಕೊಂಡು ಚರ್ಚೆ ಮಾಡಲು ಇದೊಂದು ಸದಾವಕಾಶ. ಮಧ್ಯೆ ಮಧ್ಯೆ ಹಣ-ದುಡ್ಡು ಈ ವಿಷಯಗಳ ಬಗೆಗಿನ ಕನ್ನಡ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುವುದು. ನೇರಪ್ರಸಾರದ 35582http://kannada.oneindia.com/img/2009/03/30-madhukant2.jpg191713fm channelಮೇ 3ರಂದು ಅಮೆರಿಕ ಎಫ್ಎಂನಲ್ಲಿ ಕನ್ನಡದ ಕಲರವ/nri/engagements/2009/0501-kannada-program-on-america-fm-channel.htmlಕನ್ನಡದ ಕಂಪನ್ನು ಹೊರನಾಡುಗಳಲ್ಲಿ ಹರಡಲು ಕೈ ಹಚ್ಚಿರುವ ವಿಶ್ವ ಕನ್ನಡಿಗರೆಲ್ಲರು ಒಂದೆಡೆ ಸೇರಿ ಸಂವಾದ ಮಾಡುತ್ತ ಇತರ ಕನ್ನಡಿಗರಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಅಭಿವ್ಯಕ್ತಗೊಳಿಸಲು ಉತ್ತೇಜಿಸುವ ಉದ್ದೇಶದಿಂದ ಅಮೇರಿಕದಲ್ಲಿ ಮೊದಲ ಬಾರಿಗೆ ಈ ಒಂದು ರೇಡಿಯೊ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಂಟರ್ನೆಟ್ ಮೂಲಕ ಈ ಕಾರ್ಯಕ್ರಮವನ್ನು ಪ್ರಪಂಚದ ಯಾವುದೇ ಮೂಲೆಯಿಂದಲೂ ಕೇಳಬಹುದು.ಕನ್ನಡ ಸಾಹಿತ್ಯ, ಕಲೆ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿರುವವರೊಂದಿಗೆ 36340http://kannada.oneindia.com/img/2009/05/01-madhukant2.jpg191713fm channelಅಮೇರಿಕದಲ್ಲಿ ಹರಡುತ್ತಿರುವ ಕನ್ನಡದ ಅಲೆ/nri/article/2009/0504-radio-jockey-madhu-krishnamurthy-kzsu.htmlಕಳೆದ ಎರಡು ವರುಷಗಳಿಂದಲೂ ಸ್ಥಳೀಯ ಇಟ್ಸ್‌ಡಿಫ್ಫ್ ರೇಡಿಯೊದಲ್ಲಿ ಆಗಾಗ ಕಾರ್ಯಕ್ರಮ ನೀಡುತ್ತಿದ್ದ ಅಮೆರಿಕನ್ನಡಿಗ ಮಧು ಕೃಷ್ಣಮೂರ್ತಿ ಅವರು ಈಗ ಸ್ವತಂತ್ರವಾಗಿ ರೇಡಿಯೋ ಕಾರ್ಯಕ್ರಮ ನಡೆಸುವ ಅರ್ಹತೆ ಪಡೆದಿದ್ದಾರೆ. ಕೆಜಿಯಸ್‌ಯು ಸ್ಟಾನ್‌ಫೋರ್ಡ್ ರೇಡಿಯೊದಲ್ಲಿ ಇನ್ನು ಮುಂದೆ ಹೆಚ್ಚು ಹೆಚ್ಚು ಮಧುರವಾದ ಕನ್ನಡ ಕಾರ್ಯಕ್ರಮ ನಡೆಸುವ ಅಭಿಲಾಶೆ ಮಧು ಹೊಂದಿದ್ದಾರೆ. ಕನ್ನಡ ನಾಡಿನಿಂದ ದೂರಿದ್ದು ಕನ್ನಡದ ಗೀಳು ಹಚ್ಚಿಸಿಕೊಂಡ ತಮ್ಮ 36388http://kannada.oneindia.com/img/2009/05/04-madhu-krishnamurthy2.jpg35075bengaluruಪತ್ನಿಯರಿಂದ ಅತಂತ್ರರಾದ ಗಂಡಂದಿರ ಸ್ವಾತಂತ್ರ್ಯ ಕಹಳೆ/news/2009/08/04/harassed-husbands-meet-on-august-15-in-shimla.htmlಬೆಂಗಳೂರು, ಆ. 4 : ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ ಎಂದು ಪ್ರೇಮಕವಿ ಕೆಎಸ್ ನರಸಿಂಹಸ್ವಾಮಿಯವರು ಹೆಂಡತಿಯನ್ನು ಕೋಟಿ ರುಪಾಯಿಗೆ ಹೋಲಿಸಿದ್ದಾರೆ. ಆದರೆ ಅದೇ ಕೋಟಿ ರುಪಾಯಿಯ ಹೆಂಡತಿಯರಿಂದ ಪೀಡನೆಗೊಳಗಾಗಿ ಕೋತಿಯಂತಾಗಿರುವ ಗಂಡಂದಿರು ಆಗಸ್ಟ್ 15ರಂದು ಸ್ವಾತಂತ್ರ್ಯ ಬಯಸಿ ಶೀಮ್ಲಾದಲ್ಲಿ ಸಮಾವೇಶ ನಡೆಸಲಿದ್ದಾರೆ.ದೇಶದೆಲ್ಲೆಡೆ ವರದಕ್ಷಿಣೆ ಸಾವು, ಪತಿಯರಿಂದ ಪತ್ನಿಯರ ಮೇಲೆ ದೌರ್ಜನ್ಯದಂತಹ ಸುದ್ದಿಗಳೇ ಪ್ರಾಮುಖ್ಯತೆ ಪಡೆಯುತ್ತವೆ. 38422http://kannada.oneindia.com/img/2009/08/04-harassed-husband1.jpg35075bengaluruಸ೦ತ್ರಸ್ತರಿಗಾಗಿ ಸಿಎಂ ಪಾದಯಾತ್ರೆ/news/2009/10/06/yeddyurappa-and-his-colleagues-does-padayatra.htmlಬೆಂಗಳೂರು, ಅ. 6 : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಭಾರೀ ಮಳೆಯ ಪ್ರವಾಹದಿ೦ದಾಗಿ ತತ್ತರಿಸಿರುವ ಸ೦ತ್ರಸ್ತರ ನೆರವಿಗೆ ಮುಖ್ಯಮ೦ತ್ರಿಗಳು, ಸಚಿವರು, ಸ೦ಸದರು ಮತ್ತು ಜನಪ್ರತಿನಿಧಿಗಳೊ೦ದಿಗೆ ಅಕ್ಟೋಬರ್ 7ರ೦ದು ಬೆ೦ಗಳೂರಿನಲ್ಲಿ ಪಾದಯಾತ್ರೆ ನಡೆಸಲಿದ್ದಾರೆ.ನಗರದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಅವರು, ನೆರೆಹಾವಳಿಯಿ೦ದ ಮನೆ, ಮಠ ಕಳೆದುಕೊ೦ಡ ನಿರಾಶ್ರಿತರಾಗಿರುವ ಜನತೆಗೆ ನೆರವು ನೀಡಲು ಬೆ೦ಗಳೂರಿನ ಬೀದಿಗಳಲ್ಲಿ ಮನೆ-ಮನೆಗೆ ಹೋಗಿ ದೇಣಿಗೆ ಸ೦ಗ್ರಹಿಸುವುದಾಗಿ 39536http://kannada.oneindia.com/img/2009/10/06-yediyurappa-oath2.jpg35075bengaluruಪ್ರವಾಹ ನಿಧಿ : ಅವರೆಲ್ಲಿ ಐಟಿ ಮಂದಿ?/news/2009/10/08/flood-corporates-conspicuous-by-their-absence.htmlಉತ್ತರ ಕರ್ನಾಟಕದಲ್ಲಿ ಆಗಿರುವ ಜಲಪ್ರಳಯಕ್ಕೆ ಲಕ್ಷಾಂತರ ಮಂದಿ ವಸತಿಹೀನರಾಗಿರುವ ತಿಳಿದಿರುವ ಸಂಗತಿ. ಪ್ರವಾಹಕ್ಕೀಡಾಗಿರುವ ನತದೃಷ್ಟರ ಪುನರ್ ವಸತಿಗೆ ನೂರಾರು ಕೋಟಿ ರುಪಾಯಿಗಳ ಅವಶ್ಯಕತೆ ಇದೆ. ಮನೆಯಿಲ್ಲ, ಮಠಯಿಲ್ಲ, ವರುಣ ಮುನಿಸಿಗೆ ಪ್ರವಾಹದ ಅಬ್ಬರಕ್ಕೆ ಎಲ್ಲವೂ ಕಳೆದುಹೋಗಿದೆ. ಇಂತಹ ಸಂಕಷ್ಟ ಸಮಯದಲ್ಲಿ ಅವರ ಕೈಹಿಡಿಯುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇದೇ ಕಾರಣಕ್ಕೆ ನಿಧಿ ಸಂಗ್ರಹಕ್ಕಾಗಿ ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ 39576http://kannada.oneindia.com/img/2009/10/08-wipro-logo.jpg35075bengaluruಬೆಂಗಳೂರಿನಲ್ಲಿ ಆಸ್ಕರ್ ವಿಜೇತ ಸ್ಮೈಲ್ ಪಿಂಕಿ/movies/headlines/2009/10/08-smile-pinki-in-bengaluru-pvr-cinemas.html2009ರ ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ಸ್ಮೈಲ್ ಪಿಂಕಿ' ಬೆಂಗಳೂರಿನ ಪಿವಿಆರ್ ಚಿತ್ರಮಂದಿರಗಳಲ್ಲಿ ಬುಧವಾರದಿಂದ(ಅ.7) ಪ್ರದರ್ಶನಗೊಳ್ಳುತ್ತಿದೆ. ಒಂದು ವಾರ ಕಾಲ ಈ ಚಿತ್ರ ನಗರದಲ್ಲಿ ಪ್ರದರ್ಶನ ಕಾಣಲಿದೆ. ಈಗಾಗಲೇ ಈ ಚಿತ್ರ ಮುಂಬೈ ಮತ್ತು ಚೆನ್ನೈ ನಗರಗಳಲ್ಲಿ ಪ್ರದರ್ಶನಗೊಂಡು ಉತ್ತಮ ಪ್ರತಿಕ್ರಿಯೆಗೆ ಪಾತ್ರವಾಗಿದೆ.'ಸ್ಮೈಲ್ ಪಿಂಕಿ' ಚಿತ್ರ ಭಾರತದ ಐದು ನಗರಗಳಲ್ಲಿ ಪ್ರದರ್ಶನಗೊಳ್ಳತ್ತಿದ್ದು ದೆಹಲಿ ಮತ್ತು ವಾರಣಾಸಿಗಳಲ್ಲೂ 39579http://kannada.oneindia.com/img/2009/10/08-smile-pinki1.jpg35075bengaluruಹಸಿವು ಹೆಚ್ಚಿಸುವ ದಂಟಿನ ಸೊಪ್ಪಿನ ಪಲ್ಯ/recipe/palya/2009/1008-dantina-soppina-palya.htmlಹೆಚ್ಚು ನಾರಿನಂಶ ಹೊಂದಿರುವ ದಂಟಿನ ಸೊಪ್ಪಿನ ಪಲ್ಯ ಊಟದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ ಆರೋಗ್ಯಕ್ಕೂ ಹಿತಕರ. ದಂಟಿನ ಸೊಪ್ಪಿನ ಪಲ್ಯವನ್ನು ಬಿಸಿಬಿಸಿ ಅನ್ನದೊಂದಿಗೆ ತುಪ್ಪ ಬೆರೆಸಿ ತಿಂದರೆ ನಿಮಗೆ ಗೊತ್ತಿಲ್ಲದಂತೆಯೇ ಎರಡು ತುತ್ತು ಜಾಸ್ತಿಯೇ ಹೊಟ್ಟೆಗಿಳಿದಿರುತ್ತದೆ. ಚಪಾತಿ, ರೊಟ್ಟಿಯೊಡನೆಯೂ ದಂಟಿನ ಸೊಪ್ಪಿನ ಪಲ್ಯವನ್ನು ತಿನ್ನಬಹುದು.* ಭಾರತಿ ಎಚ್ಎಸ್, ಬೆಂಗಳೂರುಬೇಕಾಗುವ ಪದಾರ್ಥಗಳುದಂಟಿನ ಸೊಪ್ಪು ಒಂದು ಬಟ್ಟಲುಬೆಳ್ಳುಳ್ಳಿ ಆರು ಎಸಳು 39590http://kannada.oneindia.com/img/2009/10/08-dantina-soppina-palya1.jpgnews"> ಮಿಯಾಂವ್ ಎಫ್ಎಮ್ ಸಿಓಓ ಅನಿಲ್ ರಾಜೀನಾಮೆ | Meow COO Anil Srivatsa resigns - ಮಿಯಾಂವ್ ಎಫ್ಎಮ್ ಸಿಓಓ ಅನಿಲ್ ರಾಜೀನಾಮೆ - Kannada Oneindia

ಮಿಯಾಂವ್ ಎಫ್ಎಮ್ ಸಿಓಓ ಅನಿಲ್ ರಾಜೀನಾಮೆ

ನವದೆಹಲಿ, ಜೂ. 1 : 'ಅನಿಲ್ ಕಿ ಆವಾಜ್' ಮುಖಾಂತರ ವಿಶ್ವದಾದ್ಯಂತ ಮನೆಮಾತಾಗಿದ್ದ ಬೆಂಗಳೂರಿನ ಹುಡುಗ ರೇಡಿಯೋ ಜಾಕಿ ಅನಿಲ್ ಶ್ರೀವತ್ಸ್ ಅವರು ಇಂಡಿಯಾ ಟುಡೆ ಕಂಪನಿಯ ಮಿಯಾಂವ್ ಎಫ್ಎಮ್ ಚಾನಲ್ ನ ಚೀಫ್ ಆಪರೇಟಿಂಗ್ ಆಫೀಸರ್ (ಸಿಓಓ) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಆರ್ ಜೆ ಆಗಿ ರೇಡಿಯೋ ಶ್ರೋತೃಗಳ ಮನಗೆದ್ದಿದ್ದ ಅನಿಲ್ ಸಿಓಓ ಆಗಿದ್ದಾಗಲೂ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. 'ಬಿಟ್ವೀನ್ ದಿ ಶೀಟ್ಸ್' ಎಂಬ ಅವರು ಪ್ರಾರಂಭಿಸಿದ ಕಾರ್ಯಕ್ರಮ ಜನಜನಿತವಾಗಿತ್ತು.

ಅಮೆರಿಕಾದಲ್ಲಿ ಡಿಗ್ರಿ ಓದುತ್ತಿದ್ದಾಗಲೇ ರೇಡಿಯೋ ಜಾಕಿಯಾಗಿ ಹೆಸರು ಮಾಡಿದ್ದ ಅನಿಲ್ ಶ್ರೀವತ್ಸ, ಬಲುಬೇಗನೆ ಯಶಸ್ಸಿನ ತುತ್ತತುದಿಯೇರಿದರು. ದೂರದರ್ಶನ, ಕೇಬಲ್ ನೆಟ್ವರ್ಕ್, ಡಿಟಿಎಚ್ ಮತ್ತು ಐಪಿಟಿವಿಗಳಲ್ಲಿಯೂ ಕೈಯಾಡಿಸಿ ಸೈ ಎನಿಸಿಕೊಂಡರು.

ರೇಡಿಯೋ ಬಗೆಗಿನ ಅವರ ಪ್ರೀತಿ ಯಾವ ಮಟ್ಟದ್ದಿತ್ತೆಂದರೆ, ಟಿವಿ ಚಾನಲ್ ಗಾಗಿ ಕಾರ್ಯನಿರ್ವಹಿಸುತ್ತಿದ್ದಾಗಲೂ ದೆಹಲಿಯಲ್ಲಿನ ತಮ್ಮ ಮನೆಯಿಂದಲೇ 'ಅನಿಲ್ ಕಿ ಆವಾಜ್' ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಮಿಯಾಂವ್ ಸಿಓಓ ಆದಮೇಲೆ ಕೂಡ ಅಮೆರಿಕದ ಶ್ರೋತೃಗಳಿಗಾಗಿ ತಮ್ಮ ಮನೆಯಿಂದ ಕಾರ್ಯಕ್ರಮ ಬಿತ್ತರಿಸುತ್ತಿದ್ದರು. ಈ ಕಾರ್ಯಕ್ರಮ ಅಮೆರಿಕದಾದ್ಯಂತ ಭಾರೀ ಜನಪ್ರಿಯತೆ ಗಳಿಸಿತು.

ಮಿಯಾಂವ್ ಎಫ್ಎಮ್ ನಲ್ಲಿ 'ಮಹಿಳೆಯರಿಗಾಗಿ ಮಾತ್ರ' ಚಾನಲ್ ಪ್ರಾರಂಭಿಸಿದ ಶ್ರೇಯಸ್ಸು ಅನಿಲ್ ಅವರಿಗೆ ಸಲ್ಲುತ್ತದೆ. ಮುಂಬೈನ ಬೆಸ್ಟ್ ಬಸ್ ಗಳಲ್ಲೆಲ್ಲ ಇದರ ಬಗ್ಗೆ ಜಾಹೀರಾತು ನೀಡಿ ಭಾರೀ ಸಂಚಲನವನ್ನುಂಟು ಮಾಡಿದ್ದರು.

ಇಂದು ತಮ್ಮ ಕೊನೆಯ ದಿನವನ್ನು ಮಿಯಾಂವ್ ನಲ್ಲಿ ಪೂರೈಸಿರುವ ಅನಿಲ್ ಶ್ರೀವತ್ಸ ತಾವು ನಮ್ಮ ಬೆಂಗಳೂರಿಗೆ ಬರುತ್ತಿರುವುದಾಗಿ ಒನ್ ಇಂಡಿಯಾ.ಇನ್ ಗೆ ಖಚಿತಪಡಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+