ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾಗೆ ತಕ್ಕ ಮಗ ರಾಹುಲ್ ?

By Staff
|
Google Oneindia Kannada News

Rahul gandhi
ನವದೆಹಲಿ, ಮೇ. 28 : 2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಮಂತ್ರಿ ಸ್ಥಾನ ನಿರಾಕರಿಸಿದ್ದು ಗೊತ್ತಿರುವ ಸಂಗತಿ. 2009 ರಲ್ಲಿ ಅವರ ಮಗ ರಾಹುಲ್ ಗಾಂಧಿ ಕೇಂದ್ರದ ಸಚಿವ ಸ್ಥಾನ ಒಲ್ಲೆ ಎನ್ನುವ ಮೂಲಕ ದೊಡ್ಡತನ ಮೆರೆದಿದ್ದಾರೆ ? ಕಾಂಗ್ರೆಸ್ ಪಾಳೆಯದಲ್ಲಂತೂ ರಾಹುಲ್ ಸಾಕ್ಷಾತ್ ದೇವರಾಗಿ ಪರಿಣಮಿಸಿದ್ದಾರೆ. ಭಾವಿ ಪ್ರಧಾನಿ ಎಂದೇ ಬಿಂಬಿಸಿಕೊಂಡಿರುವ ರಾಹುಲ್ ಗಾಂಧಿ, ಸಚಿವ ಸ್ಥಾನದ ಅನುಭವವನ್ನು ಪಡೆದುಕೊಳ್ಳಬೇಕಿತ್ತು ಎನ್ನುವುದು ಕೆಲವರ ವಾದ. ಇವರ ತಂದೆ ರಾಜೀವ ಗಾಂಧಿ ಕೂಡಾ ಕೇಂದ್ರ ಸಚಿವರಾಗಿಯೇ ಪ್ರಧಾನಮಂತ್ರಿಯಾಗಿದ್ದರಲ್ಲವೇ.

ಗುರುವಾರ ರಾಷ್ಟ್ರಪತಿ ಭವನದ ಅಶೋಕ್ ಹಾಲ್ ನಡೆದ ಎರಡನೇ ಹಂತದ ಸಂಪುಟ ವಿಸ್ತರಣೆ ಕಾರ್ಯಕ್ರಮ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಎದುರಾದ ರಾಹುಲ್ ಸಚಿವ ಸ್ಥಾನ ಕುರಿತು ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಾಯಿತು. ಸ್ವಲ್ಪ ಹೊತ್ತು ತಡವರಿಸಿದ ರಾಹುಲ್ ನಂತರ ಸಾವರಿಸಿಕೊಂಡು, ದೇಶದ ಜನತೆ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆ ನನಗೆ ಮುಖ್ಯ. ಕೇಂದ್ರ ಸಚಿವ ಸ್ಥಾನ ನಿರ್ವಹಿಸುವುದರಲ್ಲಿ ನನಗೆ ಆಸಕ್ತಿ ಇಲ್ಲ. ಏಕಕಾಲದಲ್ಲೇ ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟದ ಕೆಲಸ ಎನ್ನುವುದು ನನ್ನ ಭಾವನೆ. ಆದ್ದರಿಂದ ಕೇಂದ್ರ ಸಚಿವ ಸ್ಥಾನ ನಿರಾಕರಿಸಿದೆ ಎಂದು ರಾಹುಲ್ ಉತ್ತರಿಸಿದ್ದಾರೆ.

ನಂತರ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ ಸುಪ್ರಿಂ ಲೀಡರ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸರಕಾರದಲ್ಲಿ ಸಚಿವ ಸ್ಥಾನ ವಹಿಸಿಕೊಳ್ಳಬೇಕು ಎನ್ನುವುದು ಪ್ರಧಾನಿ ಸೇರಿ ಕಾಂಗ್ರೆಸ್ ಕಾರ್ಯಕರ್ತರ ಬಯಕೆಯಾಗಿತ್ತು. ಆದರೆ, ಅವರು ಪಕ್ಷ ಸಂಘಟನೆಯತ್ತ ಹೆಚ್ಚು ಒಲವು ತೋರಿಸಿದ್ದಾರೆ ಎಂದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X