ಸೋನಿಯಾಗೆ ತಕ್ಕ ಮಗ ರಾಹುಲ್ ?

ಗುರುವಾರ ರಾಷ್ಟ್ರಪತಿ ಭವನದ ಅಶೋಕ್ ಹಾಲ್ ನಡೆದ ಎರಡನೇ ಹಂತದ ಸಂಪುಟ ವಿಸ್ತರಣೆ ಕಾರ್ಯಕ್ರಮ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ಎದುರಾದ ರಾಹುಲ್ ಸಚಿವ ಸ್ಥಾನ ಕುರಿತು ಪ್ರಶ್ನೆಗಳ ಪ್ರವಾಹವನ್ನೇ ಎದುರಿಸಬೇಕಾಯಿತು. ಸ್ವಲ್ಪ ಹೊತ್ತು ತಡವರಿಸಿದ ರಾಹುಲ್ ನಂತರ ಸಾವರಿಸಿಕೊಂಡು, ದೇಶದ ಜನತೆ ಬದಲಾವಣೆ ಬಯಸಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆ ನನಗೆ ಮುಖ್ಯ. ಕೇಂದ್ರ ಸಚಿವ ಸ್ಥಾನ ನಿರ್ವಹಿಸುವುದರಲ್ಲಿ ನನಗೆ ಆಸಕ್ತಿ ಇಲ್ಲ. ಏಕಕಾಲದಲ್ಲೇ ಎರಡೆರಡು ಜವಾಬ್ದಾರಿಗಳನ್ನು ನಿರ್ವಹಿಸುವುದು ಕಷ್ಟದ ಕೆಲಸ ಎನ್ನುವುದು ನನ್ನ ಭಾವನೆ. ಆದ್ದರಿಂದ ಕೇಂದ್ರ ಸಚಿವ ಸ್ಥಾನ ನಿರಾಕರಿಸಿದೆ ಎಂದು ರಾಹುಲ್ ಉತ್ತರಿಸಿದ್ದಾರೆ.
ನಂತರ ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ ಸುಪ್ರಿಂ ಲೀಡರ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸರಕಾರದಲ್ಲಿ ಸಚಿವ ಸ್ಥಾನ ವಹಿಸಿಕೊಳ್ಳಬೇಕು ಎನ್ನುವುದು ಪ್ರಧಾನಿ ಸೇರಿ ಕಾಂಗ್ರೆಸ್ ಕಾರ್ಯಕರ್ತರ ಬಯಕೆಯಾಗಿತ್ತು. ಆದರೆ, ಅವರು ಪಕ್ಷ ಸಂಘಟನೆಯತ್ತ ಹೆಚ್ಚು ಒಲವು ತೋರಿಸಿದ್ದಾರೆ ಎಂದರು.
(ಏಜನ್ಸೀಸ್)












Click it and Unblock the Notifications