ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದ ಮೆಗಾ ರಸ್ತೆಗಳಿಗೆ ಟೋಲ್ ಶುಲ್ಕ ನಿಗದಿ

By Staff
|
Google Oneindia Kannada News

Karnataka plans to develop 200 toll roads
ಬೆಂಗಳೂರು, ಮೇ.23: ರಾಜ್ಯದಲ್ಲಿನ ಸುಮಾರು 200 ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳನ್ನು (ನಾಲ್ಕು ಹಾಗೂ ಎರಡು ಪಥದ ರಸ್ತೆ) ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ರಸ್ತೆಗಳನ್ನು ಬಳಸುವ ವಾಹನಗಳಿಗೆ ಟೋಲ್ ಶುಲ್ಕ ವಿಧಿಸಲು ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ.

ಇದರಂತೆ ನಾಲ್ಕು ಪಥದ ರಸ್ತೆಗಳಲ್ಲಿ ಸಂಚರಿಸುವ ಕಾರು, ಜೀಪು, ವ್ಯಾನ್ ಮುಂತಾದ ಹಗುರ ವಾಹನಗಳಿಗೆ ಕಿಲೋ ಮೀಟರ್‌ಗೆ 65 ಪೈಸೆಯಂತೆ, ಹಗುರ ವಾಣಿಜ್ಯ ವಾಹನಗಳಿಗೆ ಕಿಲೋ ಮೀಟರ್‌ಗೆ 1.50 ರೂ ನಂತೆ, ಬಸ್. ಟ್ರಕ್ ಮುಂತಾದ ದೊಡ್ಡ ವಾಹನಗಳಿಗೆ ರೂ 2.20 ಮತ್ತು ಅತ್ಯಂತ ಭಾರಿ ವಾಹನಗಳಿಗೆ ರೂ 3.45 ಪೈಸೆ ದರ ವಿಧಿಸಲಾಗುತ್ತದೆ.

ಹಾಗೆಯೇ ಜೋಡಿ ರಸ್ತೆಗಳಲ್ಲಿ ಸಂಚರಿಸುವ ಹಗುರ ಸಾರ್ವಜನಿಕ ವಾಹನಗಳಿಗೆ ಕಿಲೋ ಮೀಟರ್‌ಗೆ 60 ಪೈಸೆಯಂತೆ, ಹಗುರ ವಾಣಿಜ್ಯ ವಾಹನಕ್ಕೆ 75 ಪೈಸೆ, ಬಸ್, ಟ್ರಕ್ಕ್ ಇತ್ಯಾದಿಗೆ ರೂ 1.80 ಪೈಸೆಯಂತೆ, ಭಾರೀ ವಾಹನಗಳಿಗೆ ರೂ 2.25ನಂತೆ ಸುಂಕವನ್ನು ವಿಧಿಸಲಾಗುವುದು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X