ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ 'ವಾರ್ ರೂಂ'ನಲ್ಲಿ ರಾಹುಲ್ ಚಹಾ ಕೂಟ!

By Staff
|
Google Oneindia Kannada News

Rahul gandhi
ನವದೆಹಲಿ, ಮೇ.17: ಕಾಂಗ್ರೆಸ್ ಪಕ್ಷ ಮತ್ತೆ ಗತವೈಭವಕ್ಕೆ ಮರಳಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಚುನಾವಣಾ ಪ್ರಚಾರದ ವೈಖರಿಯೇ ಕಾರಣ ಎಂದು ಯುವ ಕಾಂಗ್ರೆಸ್ ಸಂಸದರು ಭಾನುವಾರ ರಾಹುಲ್ ಮೇಲೆ ಪ್ರಶಂಸೆಯ ಮಳೆ ಗರೆದರು.

ಅಜ್ಮೀರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಸಚಿನ್ ಪೈಲಟ್ ಮಾತನಾಡುತ್ತಾ, ರಾಹುಲ್ ರ ಶ್ರಮದ ಫಲವೇ ಈ ಗೆಲುವು ಎಂದರು. ಯುವ ಮತದಾರರನ್ನು ರಾಹುಲ್ ಆಕರ್ಷಿಸಿದ್ದು ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು ಎಂದು ನವದೆಹಲಿಯ ಕಾಂಗ್ರೆಸ್ ಸಭೆಯಲ್ಲಿ ಭಾಗವಹಿಸಿದ್ದ ಪೈಲಟ್ ಹೇಳಿದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತೆ ಅಧಿಪತ್ಯ ಸಾಧಿಸಲು ರಾಹುಲ್ ಗಾಂಧಿ ಪಾತ್ರ ಅವಿಸ್ಮರಣೀಯ ಎಂದು ಆ ರಾಜ್ಯದಿಂದ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಜಿತಿನ್ ಪ್ರಸಾದ್ ಹೇಳಿದರು. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಸುಸ್ಥಿರ, ಸುಭದ್ರ ಮತ್ತು ಕ್ರಿಯಾತ್ಮಕ ಸರಕಾರವನ್ನು ನೀಡಲಿದೆ ಎಂದರು.

ಜಾತಿ ಆಧಾರಿತ ರಾಜಕೀಯವನ್ನು ಬದಿಗಿಟ್ಟ ಉತ್ತರ ಪ್ರದೇಶದ ಮತದಾರರು ಅಭಿವೃದ್ಧಿ ಪರ ವಾಲಿದ್ದಾರೆ. ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಯುವ ನಾಯಕರಾದ ಜ್ಯೋತಿರಾದಿತ್ಯ ಶಿಂಡ್ಯಾ, ಮಿಲಿಂದ್ ಡಿಯೋರಾ, ದೀಪೇಂದ್ರ ಹೂಡ, ಅಶೋಕ್ ತನ್ವರ್, ಮೀನಾಕ್ಷಿ ನಟರಾಜನ್ ಮತ್ತು ಭನ್ ವರ್ ಜಿತೇಂದ್ರ ಸಿಂಗ್ ಭಾಗವಹಿಸಿದ್ದರು.

ರಾಹುಲ್ ಟೀ ಪಾರ್ಟಿ
ಏತನ್ಮಧ್ಯೆ ರಾಹುಲ್ ಗಾಂಧಿ ಪಕ್ಷದ ಸದಸ್ಯರನ್ನು ಟೀ ಪಾರ್ಟಿಗೆ ಆಹ್ವಾನಿಸಿದ್ದರು. ಪಕ್ಷದ ಫಲಿತಾಂಶದ ಬಗ್ಗೆ ಹಾಗೂ ಮುಂದಿನ ನಿರ್ಧಾರಗಳ ಬಗ್ಗೆ ಚಹಾ ಕೂಟದಲ್ಲಿ ಚರ್ಚಿಸಲಾಯಿತು. ವಿವಿಧ ರಾಜ್ಯಗಳಲ್ಲಿ ಗೆದ್ದಿರುವ ಪಕ್ಷದ ಹುರಿಯಾಳುಗಳನ್ನು ಚಹಾ ಕೂಟಕ್ಕೆ ಆಹ್ವಾನಿಸಲಾಗಿತ್ತು. ಇವರೊಂದಿಗೆ ರಾಹುಲ್ ಚರ್ಚಿಸಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷದ 'ವಾರ್ ರೂಮ್' ಎಂದೇ ಖ್ಯಾತಿ ಪಡೆದಿರುವ ನವದೆಹಲಿಯ 15ನೇ ರಾಕಬ್ ಗಂಜ್ ರಸ್ತೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಚಹಾ ಕೂಟ ನಡೆದದ್ದು ವಿಶೇಷವಾಗಿತ್ತು.

(ಏಜೆನ್ಸೀಸ್)

ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ
ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X