ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಸನದಲ್ಲಿ ಹೊಸ ದಾಖಲೆ ನಿರ್ಮಿಸಿದ ಗೌಡರು

By Staff
|
Google Oneindia Kannada News

H D Devegowda
ಬೆಂಗಳೂರು, ಮೇ.17: ಹಾಸನ ಲೋಕಸಭೆ ಕ್ಷೇತ್ರದಲ್ಲಿ 2,91,113 ಮತಗಳ ಅಂತರದಿಂದ ತಮ್ಮ ಪ್ರತಿಸ್ಪರ್ಧಿಯನ್ನು ಸೋಲಿಸುವ ಮೂಲಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ರಾಜ್ಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಕೆ ಎಚ್ ಹನುಮೇಗೌಡ ಅವರ ಖಾತೆಗೆ 2,05,362 ಮತಗಳು ಜಮೆಯಾಗಿದ್ದರೆ ದೇವೇಗೌಡ ಅವರ ಖಾತೆಗೆ 496420 ಮತಗಳು ಬಿದ್ದಿವೆ. ಹಾಗೆಯೇ ಕಾಂಗ್ರೆಸ್ ಅಭ್ಯರ್ಥಿ ಬಿ ಶಿವರಾಂ ಅವರು 2,01,085 ಮತಗಳನ್ನು ಗಳಿಸಿದ್ದಾರೆ. ಕೊನೆಯ ಸುತ್ತಿನ ಮತಎಣಿಕೆವರೆಗೂ ಗೌಡರು ಗೆಲುವಿನ ಅಂತರವನ್ನು ಕಾಯ್ದುಕೊಂಡಿದ್ದರು. ಕಡೂರು ಸೇರಿದಂತೆ ಈ ಹಿಂದಿನ ಎಂಟು ವಿಧನಾಸಭೆ ಚುನಾವಣೆಗಳಲ್ಲೂ ದೇವೇಗೌಡರು ಭಾರಿ ಅಂತರದಿಂದ ಜಯಭೇರಿ ಬಾರಿಸಿದ್ದರು.

ಲಿಂಗಾಯತರು ಮತ್ತು ಕುರುಬರ ಪ್ರಾಬಲ್ಯ ಇರುವ ಅರಸಿಕೆರೆ, ಸಕಲೇಶಪುರ ಮತ್ತು ಕಡೂರಿನಲ್ಲಿ ಅತ್ಯಧಿಕ ಮತಗಳ ಅಂತರದಿಂದ ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರು. ಹೊಳೆನರಸಿಪುರ ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಧಿಕ ಮತಗಳನ್ನು ಗಳಿಸಿದ್ದ ಗೌಡರು ಕಡೂರು ವಿಧಾನಸಭಾ ಕ್ಷೇತ್ರದಿಂದ ಅತಿ ಕಡಿಮೆ ಮತಗಳ ಅಂತರದಿಂದ ಜಯಮಾಲೆ ಧರಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ
ಮಹಾಚುನಾವಣೆ 2009 ಫಲಿತಾಂಶ : ಕ್ಷಣಕ್ಷಣದ ಸುದ್ದಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X