ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಗೆ ಬೆಂಬಲ ನೀಡಲು ಬಿಜೆಡಿ ನಿರಾಸಕ್ತಿ

By Staff
|
Google Oneindia Kannada News

Naveen patnaik
ನವದೆಹಲಿ, ಮೇ. 15 : ಎನ್ ಡಿಎದಿಂದ ಸಿಡಿದು ತೃತೀಯ ರಂಗ ಸೇರ್ಪಡೆಗೊಂಡಿರುವ ಬಿಜೆಡಿ ಪಕ್ಷವನ್ನು ಯುಪಿಎ ಕಡೆ ಸೆಳೆದುಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮುಂದುವರೆಸಿದ್ದು, ಆದರೆ ಈ ವರೆಗೂ ಒರಿಸ್ಸಾ ಮುಖ್ಯಮಂತ್ರಿ ನವೀನ ಪಾಟ್ನಾಯಕ್ ಅವರಿಂದ ಬೆಂಬಲ ಕುರಿತಂತೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ, ಬಾಹ್ಯ ಬೆಂಬಲ ನೀಡುವ ಕುರಿತು ಬಿಜೆಡಿಯಲ್ಲಿ ಚಿಂತನೆ ನಡೆದಿದ್ದು, ಅಧಿಕೃತವಾಗಿ ಹೊರಬೇಕಾಗಿದೆ.

ಒಂದು ಮೂಲದ ಪ್ರಕಾರ 11 ವರ್ಷಗಳ ಎನ್ ಡಿಎ ಸಂಬಂಧವನ್ನು ಕಡಿದುಕೊಂಡಿರುವ ನವೀನ ಪಟ್ನಾಯಕ್ ಅವರು ಬಿಜೆಪಿ, ಕಾಂಗ್ರೆಸ್ಸೇತರ ಸರಕಾರ ರಚಿಸಲು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ತೃತೀಯ ರಂಗವೇ ದೇಶ ಮುನ್ನೆಡೆಸಲು ಸಮರ್ಥ ಎಂಬುದು ಅವರು ಅಭಿಮತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಬೆಂಬಲ ಘೋಷಸಲು ನವೀನ ನಿರಾಶಕ್ತಿ ತಾಳಿದ್ದಾರೆ ಎನ್ನಲಾಗಿದೆ. ಬಾಹ್ಯ ಬೆಂಬಲವನ್ನಾದರೂ ನೀಡಿ ಎಂದು ಕೈ ಮಂದಿ ಗಂಟು ಬಿದ್ದಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಬಿಜೆಡಿ ಯುಪಿಎ ಬೆಂಬಲ ನೀಡಬಹುದು. ಏನೇ ಆದರೂ ಫಲಿತಾಂಶ ಹೊರಬೀಳುವವರೆಗೂ ಕಾಯಬೇಕಷ್ಟೆ.

(ಏಜನ್ಸೀಸ್)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X