ಬೆಂಗಳೂರು ವಿಮಾನದಲ್ಲಿ ರು.1.50 ಕೋಟಿ ವಶ
ಬೆಂಗಳೂರು, ಏ.30: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಾಖಲೆ ರಹಿತ ರು.1.50 ಕೋಟಿಗಳನ್ನು ಕಸ್ಟಮ್ಅಧಿಕಾರಿಗಳು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ವ್ಯಕ್ತಿಗಳಿಂದ ಗುರುವಾರ ವಶಪಡಿಸಿಕೊಂಡಿದ್ದಾರೆ.
ಕ್ವಾಜ ಮೊಯಿನುದ್ದೀನ್ ಯೂಸುಫ್ (40) ಮತ್ತು ಫರೂಕ್ (36) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಶಾರ್ಜ್ ಗೆ ಎಮಿರೇಟ್ಸ್ ವಿಮಾನದಲ್ಲಿ ಹೊರಡುವ ಸಿದ್ಧತೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಕಸ್ಟಮ್ ಅಧಿಕಾರಿಗಳ ಬಲೆಗೆ ಬಿದ್ದರು ಎಂದು ದೇವನಹಳ್ಳಿ ಸಹಾಯಕ ಪೊಲೀಸ್ ಕಮೀಷನರ್ ಹೆಚ್ ಡಿ ಆನಂದ ಕುಮಾರ್ ತಿಳಿಸಿದ್ದಾರೆ.
ಯೂಸುಫ್ ನಿಂದ ರು.76.40 ಲಕ್ಷಗಳನ್ನು ಹಾಗೂ ಫರೂಕ್ ನಿಂದ ರು. 73.27 ಲಕ್ಷಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಇವರಿಬ್ಬರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ ಎಂದು ಆನಂದ ಕುಮಾರ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications