ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಲೋಕಸಭೆ ಕ್ಷೇತ್ರದ ವಿವರ

By Staff
|
Google Oneindia Kannada News

J Shantha, BJP
ಬೆಂಗಳೂರು, ಏ. 13 : ರಾಜ್ಯದ ರಾಜಕೀಯದ ದಿಕ್ಕನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಕ್ಷೇತ್ರ ಬಳ್ಳಾರಿ ಎಂದರೆ ತಪ್ಪಾಗಲಾರದು. ಒಳ್ಳೆಯ ವಿಷಯಕ್ಕಿಂತ ಕೆಟ್ಟ ಸಂಗತಿಗಳಿಂದಲೇ ದೇಶದ ಗಮನ ಸೆಳೆಯುವ ಬಳ್ಳಾರಿ ಕ್ಷೇತ್ರ, ಅದ್ದೂರಿ ಪ್ರಚಾರ, ಕೋಟ್ಯಂತರ ರುಪಾಯಿ ನೀರಿನಂತೆ ಖರ್ಚು, ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿಯುವ ಆರೋಪ - ಪ್ರತ್ಯಾರೋಪ, ಜನಸಾಮಾನ್ಯರ ಕೈಯಲ್ಲಿ ಸಾವಿರ ರೂಪಾಯಿ ಗರಿಗರಿ ನೋಟು, ಗೆಲುವಿಗಾಗಿ ಯಾವುದೇ ಹಂತಕ್ಕೆ ಇಳಿಯಲು ಹಿಂಜರಿಯದ ನಾಯಕರುಗಳು. ರಾಜ್ಯದ ಅತಿ ಸೂಕ್ಷ್ಮ ಲೋಕಸಭಾ ಕ್ಷೇತ್ರ ಎನ್ನುವ ಕುಖ್ಯಾತಿ. ಗಣಿಧಣಿಗಳಿಗೆ ಭಾರಿ ಪ್ರತಿಷ್ಠೆಯ ಕಣ ಇದು ಒಟ್ಟಾರೆ ಬಳ್ಳಾರಿ ಕ್ಷೇತ್ರದ ಬಯೋಡೇಟಾ.

90ರ ದಶಕದ ತನಕ ಜಿಲ್ಲೆಯ ಜನತೆ ನಿರಂತರ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮತವನ್ನು ಮೀಸಲಾಗಿಟ್ಟಿದ್ದರು. ಸೋನಿಯಾ ಗಾಂಧಿ, ರಾಜ ಮನೆತನದ ಎಂ ವೈ ಘೋರ್ಪಡೆ, ಮಾಜಿ ಸಚಿವೆ ಬಸವರಾಜೇಶ್ವರಿ ಮೊದಲಾದ ಘಟಾನುಘಟಿಗಳನ್ನು ಆರಿಸಿ ಕಳುಹಿಸಿದ ಕ್ಷೇತ್ರ. ಇತ್ತೀಚೆಗೆ ಈ ಕ್ಷೇತ್ರ 'ಕಮಲ' ಮಯವಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮೊದಲ ಬಾರಿಗೆ ಕರುಣಾಕರ ರೆಡ್ಡಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಭದ್ರಕೋಟೆ ಎನ್ನುವ ಹೆಸರು ಅಳಿಸಿ ಹಾಕಿದರು. ಕ್ಷೇತ್ರ ವಿಂಗಡಣೆಯ ನಂತರ ಸಿರಗುಪ್ಪ ವಿಧಾನಸಭಾ ಕ್ಷೇತ್ರ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಸೇರಿದ್ದರೆ, ಕೊಪ್ಪಳದಲ್ಲಿದ್ದ ವಿಜಯನಗರ ಕ್ಷೇತ್ರ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಂದಿದೆ.

ಕ್ಷೇತ್ರ - ಬಳ್ಳಾರಿ
* ಚುನಾವಣೆ ದಿನಾಂಕ : ಏಪ್ರಿಲ್ 23

ಅಭ್ಯರ್ಥಿಗಳು

* ಕಾಂಗ್ರೆಸ್ - ಎನ್ ವೈ ಹನುಮಂತಪ್ಪ
* ಬಿಜೆಪಿ - ಜೆ ಶಾಂತ
* ಜನತಾದಳ - ಸ್ಪರ್ಧಿಸುತ್ತಿಲ್ಲ, ಕಾಂಗ್ರೆಸ್ ಗೆ ಬೆಂಬಲ

ಕ್ಷೇತ್ರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು

* ಬಳ್ಳಾರಿ
* ಕಂಪ್ಲಿ
* ವಿಜಯನಗರ
* ಸಂಡೂರು
* ಕೂಡ್ಲಿಗಿ
* ಹಗರಿಬೊಮ್ಮನಹಳ್ಳಿ
* ಹೂವಿನಹಡಗಲಿ

ಒಟ್ಟು ಮತದಾರರು - 15.39 ಲಕ್ಷ
* ಪುರುಷರು - 7.74 ಲಕ್ಷ
* ಮಹಿಳೆಯರು - 7.66 ಲಕ್ಷ

ಜಾತಿವಾರು ಲೆಕ್ಕಾಚಾರ

* ವಾಲ್ಮೀಕಿ ನಾಯಕರು 4 ಲಕ್ಷ
* ಕುರುಬರು 3 ಲಕ್ಷ
* ಲಿಂಗಾಯತರು 3 ಲಕ್ಷ
* ಎಸ್ ಸಿ 3.5 ಲಕ್ಷ
* ಅಲ್ಪ ಸಂಖ್ಯಾತರು 1.5 ಲಕ್ಷ * ಇತರರು 1 ಲಕ್ಷ

ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳ ಗಮನಕ್ಕೆ

* ಗಣಿ ಮತ್ತು ಕೃಷಿ ಕೂಲಿ ಕಾರ್ಮಿಕರ ಆರೋಗ್ಯ ಸಮಸ್ಯೆ.
* ಗ್ರಾಮೀಣ ಜನತೆ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆ.
* ವೈಯಕ್ತಿಕ ದ್ವೇಷದಿಂದ ಕೂಡಿದ ರಾಜಕಾರಣ.
* ಹೂವಿನಹಡಗಲಿಯ ಇಂಜಿನಿಯರಿಂಗ್ ಕಾಲೇಜ್ ಸ್ಥಳಾಂತರ.

(ದಟ್ಸ್ ಕನ್ನಡ ವಾರ್ತೆ)

ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X