ಕ್ರೆಡಿಟ್ ಕಾರ್ಡ್ ಬೇಕಾ? ಸ್ಥಿರ ಠೇವಣಿ ಖಾತೆ ತೆರೆಯಿರಿ

ಮುಂಬೈ, ಏ. 8 : ಕ್ರೆಡಿಟ್ ಕಾರ್ಡ್ ನಿರ್ವಹಣೆಯಿಂದಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಕೆಲ ಬ್ಯಾಂಕುಗಳು ಅರ್ಹತೆ ಇಲ್ಲದ ಗ್ರಾಹಕರಿಗೆ ಸ್ಥಿರ ಠೇವಣಿ ಖಾತೆ ತೆರೆದರೆ ಮಾತ್ರ ಕ್ರೆಡಿಟ್ ಕಾರ್ಡನ್ನು ವಿತರಿಸುತ್ತಿವೆ.

ಕ್ರೆಡಿಟ್ ಕಾರ್ಡುಗಳ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕ್ ಈ ಕ್ರಮಕ್ಕೆ ಮುಂದಾಗಿದ್ದು, ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಅನರ್ಹ ಅರ್ಜಿದಾರರು ಸ್ಥಿರ ಠೇವಣಿ ಖಾತೆ ತೆರೆದರೆ ಮಾತ್ರ ಕ್ರೆಡಿಟ್ ಕಾರ್ಡ್ ನೀಡುತ್ತಿದೆ.

ಆಕ್ಸಿಸ್ ಬ್ಯಾಂಕ್ ಕೂಡ ಇದೇ ಬಗೆಯ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ, ಇತರ ಬ್ಯಾಂಕುಗಳು ಈ ಯೋಜನೆ ಅನುಷ್ಠಾನಕ್ಕೆ ತರಲು ಮೀನಮೇಷ ಎಣಿಸುತ್ತಿವೆ. ದಿನನಿತ್ಯ ವ್ಯವಹರಿಸುವ ಗ್ರಾಹಕರಿಗೆ ತಾವು ನೀಡುತ್ತಿರುವ ಕೊಡುಗೆ ಎಂದು ಹೇಳಿವೆ. ಈ ಯೋಜನೆಯ ಜಾರಿಯಿಂದಾಗಿ ಕ್ರೆಡಿಟ್ ಕಾರ್ಡನ್ನು ಅನರ್ಹರಿಗೂ ವಿತರಿಸುವಂತಾಗಿದೆ ಮತ್ತು ಬ್ಯಾಂಕಿಗೆ ಸುರಕ್ಷತೆಯನ್ನು ಒದಗಿಸಿದೆ ಎಂಬುದು ಎಚ್ಎಸ್ ಬಿಸಿ ಕ್ರೆಡಿಟ್ ಕಾರ್ಡ್ ವಿಭಾಗದ ಮುಖ್ಯಸ್ಥರ ನಂಬಿಕೆ.

ಕನಿಷ್ಠ 20 ಸಾವಿರ ರು.ಯಿಂದ ಗರಿಷ್ಠ 3 ಲಕ್ಷ ರು.ವರೆಗೆ ಫಿಕ್ಸಡ್ ಡೆಪಾಸಿಟ್ ಖಾತೆಯನ್ನು ತೆರೆಯಬೇಕು. ಠೇವಣಿ ಇಟ್ಟಿರುವ ಶೇ.85ರಷ್ಟು ಕ್ರೆಡಿಟ್ ಮಿತಿಯನ್ನು ನಿಗದಿ ಮಾಡಲಾಗುತ್ತಿದೆ. ಕಾರ್ಡನ್ನು ಇಟ್ಟುಕೊಂಡಿರುವಷ್ಟು ದಿನ ಖಾತೆಯಿಂದ ಹಣ ತೆಗೆಯಲು ಸಾಧ್ಯವಿಲ್ಲ. ಕಾರ್ಡನ್ನು ಬಳಸಿದ ನಂತರ 90 ದಿನಗಳಲ್ಲಿ ಹಣ ಪಾವತಿ ಮಾಡದಿದ್ದರೆ ಖಾತೆಯಲ್ಲಿನ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ.

ಇದರೊಂದಿಗೆ, ದೀರ್ಘ ಕಾಲದವರೆಗೆ ಕ್ರೆಡಿಟ್ ಕಾರ್ಡನ್ನು ಬಳಸದ ಗ್ರಾಹಕರ ಕ್ರೆಡಿಟ್ ಕಾರ್ಡುಗಳನ್ನು ಐಸಿಐಸಿಐ ಬ್ಯಾಂಕು ನಿಷ್ಕ್ರಿಯಗೊಳಿಸುತ್ತಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+