ಪತ್ನಿ ಪಬ್ಲಿಕ್ ಯುಟಿಲಿಟಿ ಸರ್ವೀಸ್ ಅಲ್ಲ, ಬೇಡಿ
ಬೆಂಗಳೂರು, ಮಾ. 15 : ಪತ್ಮಿಯೆಂದರೆ ಪಬ್ಲಿಕ್ ಯಟಿಲಿಟಿ ಸರ್ವೀಸ್ ಎಂದು ಭಾವಿಸಿದರೆ ಜೋಕೆ ಎಂದು ಎಚ್ಚರಿಸಿದ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಆಕೆ ಪುರುಷ ಬದುಕಿನ ಸಂಗಾತಿ ಎಂದು ಹೇಳಿದರು.
ನಗರದ ಲ್ಯಾವಲ್ಲೆ ರಸ್ತೆಯ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ಕೌಟುಂಬಿಕ ಹಿಂಸೆ-ವಿಷಯ ಮತ್ತು ಸವಾಲು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತಿ ನಂತರ ಆಪ್ತ ಸಲಹಾ ಕೇಂದ್ರವನ್ನು ನಡೆಸುತ್ತಿರುವ ಬೇಡಿ, ಕೇಂದ್ರ ಹಾಗೂ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ನಿಷ್ಕ್ರೀಯತೆ ಕುರಿತು ಹರಿಹಾಯ್ದರು.
ದೇಶದ ಜನಸಂಖ್ಯೆಗೆ ಹೋಲಿಸಿದರೆ ಕೌಟುಂಬಿಕ ಆಪ್ತ ಸಲಹಾ ಕೇಂದ್ರಗಳ ಸಂಖ್ಯೆ ಕಡಿಮೆ. ಈ ಜವಾಬ್ದಾರಿ ನಿರ್ವಹಿಸಬೇಕಿದ್ದ ಸಮಾಜ ಕಲ್ಯಾಣ ಇಲಾಖೆ ನಿದ್ದೆ ಹೊಡೆಯುತ್ತಿದೆ. ಇಲಾಖೆಗೆ ಹಿರಿದು ಬರುವ ನಿಧಿ ಎಲ್ಲಿಗೆ ಹೋಗುತ್ತದೆ ಎಂಬುದು ಅರ್ಥಾವಾಗುತ್ತಿಲ್ಲ. ಮಾಹಿತಿ ಹಕ್ಕು ಕಾಯಿದೆ ಬಳಸಿ ವಿವರ ಪಡೆಯಬೇಕು ಎಂದರು. 2005ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ ಜಾರಿಗೆ ಮುನ್ನ ಪೊಲೀಸರು ಸಿಐರ್ ಪಿಸಿ ಯ ಸೆಕ್ಷನ್ 498, 304 ಬಿ, 107 ಹಾಗೂ 150 ಅಡಿ ಪ್ರಕರ ದಾಖಲಿಸಿಕೊಳ್ಳುತ್ತಿದ್ದರು. ಸೆಕ್ಷನ್ 498 ಹಾಗೂ 304 ಬಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದವು. ಕೌಟುಂಬಿಕ ದೌರ್ಜನ್ಯ ಸೆಕ್ಷನ್ 107, 150ಅಡಿ ಪರಿಗಣಿಸಬಹುದು ಎಂದು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications