ಮಾ. 13 ರಿಂದ ಪಿಯೂ ಪರೀಕ್ಷೆ ಆರಂಭ
ಬೆಂಗಳೂರು, ಫೆ. 19: 2008-2009 ನೇ ಶೈಕ್ಷಣಿಕ ವರ್ಷದ ಪದವಿ ಪೂರ್ವ ತರಗತಿಗಳಿಗೆ ಅಂತಿಮ ಪರೀಕ್ಷೆಯನ್ನು ಮಾ. 13 ರಿಂದ 26 ರವರೆಗೂ ನಡೆಸಲು ನಿರ್ಧರಿಸಲಾಗಿದೆ. ಪರೀಕ್ಷೆಗಳು ಮೂರು ಗಂಟೆಗಳ ಅವಧಿಯದ್ದಾಗಿರುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
ಈ ಬಾರಿಯ ಪಿಯೂ ಪರೀಕ್ಷೆಗಳು ರಾಜ್ಯಾದ್ಯಾಂತ ಇರುವ 856 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಸುಮಾರು 6,20,119 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮಾ. 31 ರಿಂದ ಆರಂಭವಾಗಲಿದೆ ಎಂದು ಕೆ ಇಎ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)
ಫೆ. 20 ರಿಂದ ಸಿಇಟಿ ಪ್ರವೇಶ ಅರ್ಜಿ ವಿತರಣೆ












Click it and Unblock the Notifications