ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರು ತಿಂಗಳೊಳಗೆ ಐನೂರು ರೂ.ಗೆ ಕಂಪ್ಯೂಟರ್!

By Staff
|
Google Oneindia Kannada News

Desktop computer
ನವದೆಹಲಿ, ಜ.30: ಕಂಪ್ಯೂಟರ್ ಶಿಕ್ಷಣ ದೇಶದಲ್ಲಿರುವ ಇರುವ ಎಲ್ಲ ವಿದ್ಯಾರ್ಥಿಗಳಿಗೂ ದೊರೆಯಬೇಕು ಎಂಬ ಸದುದ್ದೇಶದಿಂದ ರು.500ಕ್ಕೆ ಕಂಪ್ಯೂಟರನ್ನು, ಉಚಿತವಾಗಿ ಇ-ಶಿಕ್ಷಣವನ್ನು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಅತ್ಯಂತ ಕಡಿಮೆ ವೆಚ್ಚದ ಕಂಪ್ಯೂಟರ್ ತಯಾರಿಕೆಗೆ ಸಂಬಂಧಿಸಿದ ಪರೀಕ್ಷೆಗಳು ಪ್ರಸ್ತುತ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಚೆನ್ನೈನ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ನಡೆಯುತ್ತಿವೆ. ಮುಂದಿನ ಆರು ತಿಂಗಳಲ್ಲಿ ಕಂಪ್ಯೂಟರ್ ಗಳು ವಿದ್ಯಾರ್ಥಿಗಳ ಮುಂದೆ ಬರಲಿವೆ. ಇವುಗಳನ್ನು ಬಳಸಿಕೊಳ್ಳುವ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಸರಕಾರ ಉಚಿತವಾಗಿ ಇ-ಪಾಠಗಳನ್ನು ನೀಡಲಿದೆ.

ಈ ಕುರಿತು ಮಾತನಾಡಿದ ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅರ್.ಪಿ.ಅಗರವಾಲ್, 'ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಮೂಲಕ ಶಿಕ್ಷಣ ನೀಡುವ ರಾಷ್ಟ್ರೀಯ ಯೋಜನೆ' ಹೆಸರಿನಲ್ಲಿ ಕೇಂದ್ರ ಇದನ್ನು ಆರಂಭಿಸಲಿದೆ. ಕೇಂದ್ರ ಸಚಿವ ಅರ್ಜುನ್ ಸಿಂಗ್ ಫೆಬ್ರವರಿ 3ರಂದು ತಿರುಪತಿಯಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಐಸಿಟಿ ಯೋಜನೆಯಡಿ ನೀಡುವ ಕಂಪ್ಯೂಟರ್ ಗಳು ಸಾಧಾರಣ ಕಂಪ್ಯೂಟರ್ ಗಳಿಗಿಂತಲೂ ಚಿಕ್ಕ್ಕದಾಗಿರುತ್ತವೆ. ಇವುಗಳಲ್ಲಿ ಮೆಮೊರಿಯನ್ನು ಹೆಚ್ಚಿಸಿಕೊಳ್ಳುವ ಸದುಪಾಯ, ಲಾನ್, ವೈಫಿ ಸೌಲಭ್ಯಗಳು ಇರುತ್ತವೆ. ಕೇವಲ ಎರಡು ವ್ಯಾಟ್ ವಿದ್ಯುಚ್ಛಕ್ತಿಯಿಂದ ಕೆಲಸ ಮಾಡುವ ಈ ಕಂಪ್ಯೂಟರ್ ಗಳ ಉತ್ಪಾದನೆಗಾಗಿ ಸರ್ಕಾರ ವಿವಿಧ ಸಂಸ್ಥೆಗಳೊಂದಿಗೆ ಚರ್ಚಿಸುತ್ತಿದೆ.

20 ಸಾವಿರ ಶಿಕ್ಷಣ ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಡ್
ಐಸಿಟಿ ಕಾರ್ಯಕ್ರಮದ ಮೂಲಕ ದೇಶದಾದ್ಯಂತ 20 ಸಾವಿರ ಶಿಕ್ಷಣ ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಅಗರ್ವಾಲ್ ತಿಳಿಸಿದರು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ವಾರ್ಷಿಕ ರು.60 ಸಾವಿರ ಸಲ್ಲಿಸಬೇಕಾಗುತ್ತ್ತದೆ. ಐಸಿಟಿ ಮೂಲಕ ಇಂಟರ್ನೆಟ್ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಬಹುದು ಎಂದರು. ಆನ್ ಲೈನ್ ಪಾಠಗಳ ಮೂಲಕ ವಿದ್ಯಾರ್ಥಿಗಳು ತಮ್ಮಷ್ಟಕ್ಕೆ ತಾವೇ ಕಲಿಯುವ ಅವಕಾಶವನ್ನು ಈ ಕಾರ್ಯಕ್ರಮದ ಮೂಲಕ ರೂಪಿಸಲಾಗುತ್ತದೆ. ಇತ್ತೀಚೆಗೆ ಪ್ರಾರಂಭಿಸಿದ 'ಸಾಕ್ಷಾತ್' ವೆಬ್ ಸೈಟ್ ಮೂಲಕ ಕಾಲಕಾಲಕ್ಕೆ ಅಪ್ ಡೇಟ್ ಮಾಡಲಾಗುತ್ತದೆ. ಈ ಯೋಜನೆಗೆ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ರು.4,612 ಕೋಟಿಗಳನ್ನು ವೆಚ್ಚ ಮಾಡಲಾಗುತ್ತದೆ ಎಂದು ವಿವರ ನೀಡಿದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X