ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಲ್ಲಿ ಪ್ರಧಾನಿ ಕಂಡ ಅನಿಲ್ ಅಂಬಾನಿ

By Sridhar L
|
Google Oneindia Kannada News

ನವದೆಹಲಿ, ಜ. 14 : ಎಂಬತ್ತೊಂದರ 'ಚಿರಯುವಕ' ತನ್ನ ಪಕ್ಷದ ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಭಾರತೀಯ ಪಕ್ಷ ನಲಿದಾಡುತ್ತಿದ್ದರೆ, ಭಾರತದ ಮಿಲಿಯನೇರ್ ಗಳು ಬೇರೆಯ ರೀತಿಯಲ್ಲಿ ಚಿಂತಿಸುತ್ತಿದ್ದಾರೆ. ಅನಿಲ್ ಅಂಬಾನಿ ಮತ್ತು ಸುನೀಲ್ ಮಿತ್ತಲ್ ಅಂಥ ಘಟಾನುಘಟಿಗಳು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ದೇಶ ನಡೆಸಲು ಅತ್ಯಂತ ಶಕ್ತ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ.

ಕೊಲ್ಕತಾದಿಂದ ಟಾಟಾ ಕಂಪನಿಯ ನ್ಯಾನೋ ಕಾರು ಉತ್ಪಾದನಾ ಘಟಕ ಕಾಲುಕಿತ್ತಾಗ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ಮುಖ್ಯಮಂತ್ರಿಗಳ ಮುಕ್ತ ಆಹ್ವಾನವನ್ನು ತಿರಸ್ಕರಿಸಿದ್ದ ರತನ್ ಟಾಟಾ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಆಯ್ದುಕೊಂಡಿದ್ದರು. ಮೋದಿ ಕಾರ್ಯಕ್ಷಮತೆಯ ಬಗ್ಗೆ ಅರಿವಿದ್ದವರಿಗೆ ಇದು ಅಚ್ಚರಿ ಮೂಡಿಸಿರಲಿಲ್ಲ.

ಈಗ ಅನಿಲ್ ಅಂಬಾನಿ ಮತ್ತು ಸುನೀಲ್ ಭಾರತಿ ಮಿತ್ತಲ್ ಅವರುಗಳು ಮೋದಿಯಲ್ಲಿ ಭಾರತವನ್ನು ನಾಯಕತ್ವನ್ನು ಕಂಡಿದ್ದಾರೆ. ವೈಬ್ರಂಟ್ ಗುಜರಾತ್ ಸಮಿತ್ ನಲ್ಲಿ ಮುಂದಿನ ದಶಕಗಳಲ್ಲಿ ಭಾರತವನ್ನು ಮುನ್ನಡೆಸುವ ಮುಂದಾಲೋಚನೆ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ರಾಜ್ಯವನ್ನು ಅಷ್ಟೊಂದು ಉತ್ತಮವಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ದಿರುವ ಮೋದಿ ದೇಶವನ್ನು ಚೆನ್ನಾಗಿ ಮುನ್ನಡೆಸಬಲ್ಲರು ಎಂದು ಅನಿಲ್ ಅಂಬಾನಿ ಹೇಳಿದ್ದಾರೆ.

ನಾವು ದೊಡ್ಡದೊಡ್ಡ ಕಂಪನಿಗಳನ್ನು ನಡೆಸುತ್ತಿದ್ದೇವೆ, ಆದರೆ, ಇಡೀ ರಾಜ್ಯವನ್ನು ಇಡೀ ದೇಶವನ್ನು ಶಕ್ತವಾಗಿ ಮುನ್ನಡೆಸುವ ಏಕೈಕ ವ್ಯಕ್ತಿಯೆಂದರೆ ಮೋದಿ ಒಬ್ಬರೇ ಎಂದು ಸುನೀಲ್ ಮಿತ್ತಲ್ ಮೋದಿಯನ್ನು ಹಾಡಿಹೊಗಳಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X