ಮುಂಬೈ ಡಿ ಗುಂಪಿನಿಂದ ಧೋನಿಗೆ ಬೆದರಿಕೆ ಪತ್ರ

ನವದೆಹಲಿ, ಡಿ. 31 : ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕುಟುಂಬ ಸದಸ್ಯರಿಗೆ ಮುಂಬೈ ಡಿ ಗ್ಯಾಂಗ್ ನಿಂದ (ದಾವೂದ್ ಗುಂಪು) ಬೆದರಿಕೆ ಪತ್ರ ಬಂದಿದ್ದು, 50 ಲಕ್ಷ ರುಪಾಯಿಗಳನ್ನು ನೀಡುವಂತೆ ಬೇಡಿಕೆಯನ್ನಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಧೋನಿ ಅವರ ರಾಂಚಿ ನಿವಾಸಕ್ಕೆ ಪತ್ರದ ಮೂಲಕ ಈ ಬೆದರಿಕೆ ಬಂದಿದೆ. ಮುಂಬೈ ಡಿ ಗುಂಪಿನ ಶಾರ್ಪ್ ಶೂಟರ್ ಗಳು ಈ ಪತ್ರವನ್ನು ರವಾನಿಸಿದ್ದಾರೆ.

ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಧೋನಿ ಕುಟುಂಬ ಸದಸ್ಯರು ತಕ್ಷಣ ರಾಂಚಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದು, ಅಗತ್ಯ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯ ಜಿಲ್ಲಾಡಳಿತ ಧೋನಿ ಕುಟುಂಬಕ್ಕೆ ಭಾರಿ ಭದ್ರತೆಯನ್ನು ಒದಗಿಸಿದೆ. ಅವರ ಮನೆಗೆ ವಿಶೇಷ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+