ಏರ್ ಇಂಡಿಯಾ, ದೇಶಿಯ ಪ್ರಯಾಣ ದರ ಇಳಿಕೆ
ನವದೆಹಲಿ, ಡಿ. 30 : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಗಮನಾರ್ಹವಾಗಿ ಇಳಿಕೆ ಕಂಡಿದ್ದರಿಂದ ಖಾಸಗಿ ವಿಮಾನಯಾನ ಸಂಸ್ಥೆಗಳು ತನ್ನ ದೇಶಿಯ ವಿಮಾನಗಳ ಪ್ರಯಾಣ ದರಗಳಲ್ಲಿ ಕಡಿತ ಮಾಡುವುದಾಗಿ ಘೋಷಿಸಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ಸ್ವಾಮ್ಯದ ಏರ್ ಇಂಡಿಯಾ ಕೂಡ ಶೇ. 35 ರಿಂದ 80 ರಷ್ಟು ದೇಶಿಯ ಪ್ರಯಾಣ ದರದಲ್ಲಿ ಕಡಿತ ಮಾಡಲು ನಿರ್ಧರಿಸಿದೆ. ಜನವರಿ 1 ರಿಂದ ನೂತನ ದರಗಳು ಜಾರಿಗೆ ಬರಲಿವೆ.
ಇಂಡಿಯನ್ ಏರ್ ಲೈನ್ಸ್ ಸಂಸ್ಥೆ ತನ್ನ 19 ವಿಭಾಗಗಳ ಪ್ರಯಾಣ ದರದಲ್ಲಿ ಶೇ. 35 ರಿಂದ 80ರ ವರೆಗೆ ಕಡಿತಗೊಳಿಸಲು ನಿರ್ಧರಿಸಲಾಗಿದೆ. ಹೊಸ ವರ್ಷ ಉಡುಗೊರೆಗಾಗಿ ಇಂದಿನಿಂದಲೇ ನೂತನ ದೇಶಿಯ ಪ್ರಯಾಣ ದರಗಳ ಟಿಕೆಟ್ ಗಳನ್ನು ಮಾರಾಟ ಮಾಡಲಾಗುವುದು ಎಂದು ಏರ್ ಇಂಡಿಯಾ ಸಂಸ್ಥೆಯ ಮೂಲಗಳು ತಿಳಿಸಿವೆ. ಹೊಸವರ್ಷವನ್ನು ಆಚರಿಸಲು ಬೇರೆಡೆಗೆ ತೆರಳುವವರು ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಎಂದು ಹೊಸ ವರ್ಷಕ್ಕೆ ಎರಡು ದಿನಗಳ ಮೊದಲೇ ಈ ನೂತನ ಪ್ರಯಾಣ ದರವನ್ನು ಜಾರಿಗೆ ತರಲಾಗಿದೆ ಎಂದು ಸಂಸ್ಥೆ ಪಿಆರ್ಓ ಜಿತೇಂದ್ರ ಬಾರ್ಗವ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಜ.1ರಿಂದ ಕಿಂಗ್ ಫಿಶರ್ ವಿಮಾನ ದರ ಅಗ್ಗ: ಮಲ್ಯ












Click it and Unblock the Notifications