ರಾಹುಲ್ ಗಾಂಧಿ ಪಿಎಂ ಆಗಬೇಕೆ, ಬೇಡವೇ?
ನವದೆಹಲಿ, ಡಿ. 29 : ಗಾಂಧಿ ಮನೆತನದ ಮತ್ತೊಂದು ಕುಡಿ ರಾಹುಲ್ ಗಾಂಧಿ ದೇಶದ ಪ್ರಧಾನಮಂತ್ರಿಯಾಗಬೇಕೆ, ಬೇಡವೇ. ಇಂಥದ್ದೊಂದು ಪ್ರಶ್ನೆಯನ್ನು ಹಿಡಿದುಕೊಂಡು ದೇಶದ ತುಂಬೆಲ್ಲಾ ಗಿರಕಿ ಹೊಡೆದರೆ ಶೇ. 62 ಮಂದಿ ರಾಹುಲ್ ಗಾಂಧಿ ಮುಂದಿನ ಪ್ರಧಾನಮಂತ್ರಿಯಾಗಬೇಕು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಕೂಡಾ ಹಿಂದಿಕ್ಕಿ ರಾಹುಲ್ ಗಾಂಧಿ ಬಹುದೂರ ಕ್ರಮಿಸಿದ್ದಾರೆ ಜನಾಭಿಪ್ರಾಯದಲ್ಲಿ ?
ನವದೆಹಲಿ ಮೂಲದ ಮೀಡಿಯಾ ತಂಡವೊಂದು ದೇಶಾದ್ಯಂತ ನಡೆಸಿದ ಸರ್ವೆ ಕಾರ್ಯಕ್ರಮದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಮುಂದಿನ ಲೋಕಸಭೆ ಚುನಾವಣೆ ಈ ಸರ್ವೆ ನಡೆಸಲು ಮುಖ್ಯ ಪ್ರೇರಣೆಯಾಗಿದ್ದು, ಜನಾಭಿಪ್ರಾಯದಲ್ಲಿ ದೇಶದ ಅತ್ಯುನ್ನತ ಪೀಠ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಲು ರಾಹುಲ್ ಫಿಟ್ ಎಂದು ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಮೀಡಿಯಾ ತಂಡ ಮಾಧ್ಯಮಗಳಿಗೆ ಪ್ರಕಟಣೆ ಬಿಡುಗಡೆ ಮಾಡಿದೆ.
ದೇಶಾದ್ಯಂತ 500 ಪರ್ತಕರ್ತರ ತಂಡವೊಂದು ಸರ್ವೆ ಕಾರ್ಯನಡೆಸಿದೆ. ಭಾರತದ ಅಧಿಕಾರ ಚುಕ್ಕಾಣಿ ಯುವಕರ ಕೈಲಿರಬೇಕು ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ಹಿಡಿಯುವ ಅವಕಾಶ ಬಂದೊದಗಿದರೆ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ಹುದ್ದೆಯ ಹಾಟ್ ಫೆವರೀಟ್ ವ್ಯಕ್ತಿಯಾಗಿದ್ದಾರೆ. ಪ್ರಸ್ತುತ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಶೇ. 29 ರಷ್ಟು ಮಂದಿ ಮಾತ್ರ ಇನ್ನೊಂದು ಬಾರಿ ಪಿಎಂ ಆಗಬಹುದು ಎಂದು ಮಾತುಗಳನ್ನಾಡಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸದ್ಯದ ವಿದೇಶಾಂಗ ಖಾತೆ ಸಚಿವ ಪ್ರಣಬ್ ಮುಖರ್ಜಿ ಪ್ರಧಾನಮಂತ್ರಿಯಾದರೆ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂದು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ನಮಗೆ ಇನ್ನೂ ನ್ಯಾಯ ಸಿಕ್ಕಿಲ್ಲ: ರಾಹುಲ್ ಗಾಂಧಿ
ಹಳ್ಳಿಗರೊಡನೆ ಮಣ್ಣುಹೊತ್ತ ರಾಹುಲ್ ಗಾಂಧಿ
ರಾಹುಲ್ ಗಾಂಧಿಗೆ ಶೀಘ್ರದಲ್ಲೇ ವಿವಾಹ ಯೋಗ!












Click it and Unblock the Notifications