ಜನವರಿ 6ರವರೆಗೆ ಕಸಬ್ ಕಸ್ಟಡಿ ವಿಸ್ತರಣೆ

ನವದೆಹಲಿ, ಡಿ. 24 : ಮುಂಬೈ ಭಯೋತ್ಪಾದನೆಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನ ನ್ಯಾಯಾಂಗ ಬಂಧನವನ್ನು ಜನವರಿ 6ರ ವರೆಗೆ ಮುಂದುವರಿಸಲಾಗಿದೆ. ಭದ್ರತೆಯ ಕೊರತೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಮುಂಬೈ ನ್ಯಾಯಾಲಯಕ್ಕೆ ಮಾಡಿಕೊಂಡ ಮನವಿಯ ಮೇರೆಗೆ ಉಗ್ರ ಕಸಬ್ ನ ಪೊಲೀಸ್ ಬಂಧನವನ್ನು ಜನವರಿ 6ರ ವರೆಗೆ ಮುಂದುವರಿಸಲು ನ್ಯಾಯಾಲಯ ಸಮ್ಮತಿಸಿದೆ.

ಕಸಬ್ ಪೊಲೀಸ್ ಬಂಧವನನ್ನು ಡಿ 24 ರವರೆಗೆ ವಿಸ್ತರಿಸಲಾಗಿತ್ತು. ಇಂದು ಮತ್ತೆ ಭದ್ರತೆ ಕಾರಣಕ್ಕಾಗಿ ಜನವರಿ 6ರ ವರೆಗೆ ಬಂಧನವನ್ನು ವಿಸ್ತರಿಸಲಾಗಿದೆ. ಈ ಮದ್ಯೆ ಉಗ್ರ ಕಸಬ್, ತನ್ನ ಪರ ನ್ಯಾಯಾಲಯದಲ್ಲಿ ವಕಾಲತ್ತು ನಡೆಸುವಂತೆ ಪಾಕಿಸ್ತಾನಕ್ಕೆ ಪತ್ರ ಬರೆದಿದ್ದಾನೆ. ಆದರೆ ಪಾಕ್ ಸರ್ಕಾರ ಮುಂಬೈ ಭಯೋತ್ಪಾದನೆಯಲ್ಲಿ ಸಿದ್ದಿಬಿದ್ದಿರುವ ಉಗ್ರ ಪಾಕಿಸ್ತಾನದ ವ್ಯಕ್ತಿ ಅಲ್ಲ ಎಂದು ಈ ಗಳಿಗೆವರೆಗೂ ಹೇಳುತ್ತಲೇ ಬಂದಿದೆ.

ಆದರೆ, ಕಸಬ್ ತಂದೆ ಅಮೀರ್ ಕಸಬ್ ಪಾಕಿಸ್ತಾನಿ ಪತ್ರಿಕೆಗಳಿಗೆ ಸಂದರ್ಶನ ನೀಡಿ, ಮುಂಬೈ ದಾಳಿಯಲ್ಲಿ ಸಿಕ್ಕಿರುವ ವ್ಯಕ್ತಿ ತನ್ನ ಪುತ್ರ ಎಂದು ಹೇಳಿಕೊಂಡಿದ್ದ. ಆ ನಂತರ ಪಾಕ್ ಸರ್ಕಾರ ಆತನ ಮೇಲೆ ತೀವ್ರ ಒತ್ತಡ ತಂದು ಆತನ ಬಾಯಿಯನ್ನು ಮುಚ್ಚಿಸಿ ಹಾಕಿತು. ಅಮೀರ್ ಕಸಬ್ ಭೇಟಿಗೆ ಇಂದಿನವರೆಗೂ ಯಾರಿಗೂ ಅವಕಾಶ ನೀಡಿಲ್ಲ. ಅಮೀರ್ ಕಸಬ್ ನ ಗ್ರಾಮವಾಗಿರುವ ಪರೀದ್ ಕೋಟ್ ಗೆ ಮಾಧ್ಯಮದವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪರೀದ್ ಕೋಟ್ ಗ್ರಾಮದ ಸುತ್ತ ಸೇನಾ ಪಡೆಯನ್ನು ನಿಯೋಜಿಸಲಾಗಿದೆ.

(ದಟ್ಸ್ ಕನ್ನಡ ವಾರ್ತೆ)
ಉಗ್ರರನ್ನು ಬಂಧಿಸಿ ಇಲ್ಲವೇ ಯುದ್ಧ ಎದುರಿಸಿ
ಉಗ್ರರಿಂದಲೇ ಕರ್ಕರೆ ಸಾವು: ಮುಂಬೈ ಪೊಲೀಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+