ವಾಯುದಳದಲ್ಲಿ ಉದ್ಯೋಗ, ಮೈಸೂರಿನಲ್ಲಿ ತರಬೇತಿ

Chamundi Vihar Stadium, Mysuru
ಮೈಸೂರು, ಡಿ. 17: ಮೈಸೂರಿನಲ್ಲಿ 2009ರ ಜನವರಿ 29ರಿಂದ ಫೆಬ್ರವರಿ 1ನೇ ದಿನಾಂಕದವರೆಗೆ ನಡೆಯುವ ಭಾರತೀಯ ವಾಯುದಳದ ನೇಮಕಾತಿಗೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮತ್ತು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಡಿ.18ರಿಂದ 30ರವರೆಗೆ ನೇಮಕಾತಿ ಪರೀಕ್ಷೆಗೆ ಪೂರ್ವ ತರಬೇತಿ ನೀಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಮೇಲ್ಕಂಡ ದಿನಾಂಕಗಳಂದು ಪ್ರತಿದಿನ ಮಧ್ಯಾಹ್ನ 02.30ರಿಂದ ಸಂಜೆ 5.30ರವರೆಗೆ ತರಬೇತಿ ನೀಡಲಾಗುವುದು. ಆಸಕ್ತರು ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದೂರವಾಣಿ ಸಂಖ್ಯೆ 0821-2489972 ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿ ಸಿ.ಎಂ. ಉಮಾ ತಿಳಿಸಿದ್ದಾರೆ.

2009ರ ಜನವರಿ 29, 30 ಹಾಗೂ 31ರಂದು ಮೂರು ದಿನಗಳ ಕಾಲ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವಾಯುಪಡೆಯ ಏರ್‌ಮನ್ ಹುದ್ದೆಗಳ ನೇಮಕಾತಿಗಾಗಿ ವಿಶೇಷ ರ್‍ಯಾಲಿ ಆಯೋಜಿಸಲಾಗಿದೆ. ವಾಯುಪಡೆಯ ಗ್ರೂಪ್ ಎಕ್ಸ್ ಮತ್ತು ಗ್ರೂಪ್ ವೈ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಗ್ರೂಪ್ ಎಕ್ಸ್ ತಾಂತ್ರಿಕ ಹುದ್ದೆಗಳಿಗೆ 17ರಿಂದ 22 ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಗಳು ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಇಂಟರ್‌ಮೀಡಿಯಟ್ ಅಥವಾ10+2 ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಒಟ್ಟಾರೆ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಅಥವಾ ಸರ್ಕಾರಿ ಮಾನ್ಯತೆ ಪಡೆದಿರುವ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕನಿಷ್ಠ ಶೇ.50 ಅಂಕಗಳೊಂದಿಗೆ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್ , ಇನ್ಟ್ರುಮೆಂಟೇಷನ್ ಟೆಕ್ನಾಲಜಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ಇಂಜಿನಿಯರಿಂಗ್ ಡಿಪ್ಲೊಮಾ ಪಾಸಾಗಿರಬೇಕು.

ಗ್ರೂಪ್ ಎಕ್ಸ್ ನ ಎಜುಕೇಷನ್ ಇನ್ಸ್‌ಸ್ಪೆಕ್ಟರ್ ಟ್ರೇಡ್ ಹುದ್ದೆಗಳಿಗೆ 20ರಿಂದ 25 ವರ್ಷ ವಯೋಮಿತಿ ಇರಬೇಕು. ಸರ್ಕಾರಿ ಮಾನ್ಯತೆ ಪಡೆದ ಶಾಲಾಕಾಲೇಜುಗಳಲ್ಲಿ 2 ವರ್ಷಗಳ ಬೋಧನಾ ಅನುಭವ / ಬಿಇಡಿ ಪದವಿಯೊಂದಿಗೆ ಕಲೆ, ವಾಣಿಜ್ಯ ಅಥವಾ ವಿಜ್ಞಾನದಲ್ಲಿ ಪದವಿ ಪಡೆದಿರಬೇಕು. ಅಭ್ಯರ್ಥಿಗಳು ಬಿಇಡಿ ಮತ್ತು ಪದವಿಯಲ್ಲಿ ಕನಿಷ್ಠ ಒಟ್ಟಾರೆ ಶೇ.50ರಷ್ಟು ಅಂಕ ಗಳಿಸಿ ಉತ್ತೀರ್ಣರಾಗಿರಬೇಕು. ಅಥವಾ 20ರಿಂದ 28 ವರ್ಷ ವಯೋಮಿತಿಯಲ್ಲಿದ್ದು ಸರ್ಕಾರಿ ಮಾನ್ಯತೆ ಪಡೆದ ಶಾಲಾಕಾಲೇಜುಗಳಲ್ಲಿ 2 ವರ್ಷಗಳ ಬೋಧನಾ ಅನುಭವ / ಬಿಇಡಿ ಪದವಿಯೊಂದಿಗೆ ಎಂಎ ಇಂಗ್ಲೀಷ್ / ಎಂಎಸ್ಸಿ ಗಣಿತ, ಭೌತಶಾಸ್ತ್ರ , ಕಂಪ್ಯೂಟರ್ ವಿಜ್ಞಾನ / ಎಂಸಿಎ ಪಾಸಾಗಿರಬೇಕು.

ಗ್ರೂಪ್ ವೈ ಐಎಎಫ್ (ಸೆಕ್ಯುರಿಟಿ) ಐಎಎಫ್ (ಪೋಲೀಸ್) ಮತ್ತು ಇತರ ಎಲ್ಲಾ ಗ್ರೂಪ್ ವೈ ಟ್ರೇಡ್‌ಗಳಿಗೆ 17ರಿಂದ 22 ವರ್ಷಗಳ ವಯೋಮಿತಿ ಹೊಂದಿದ್ದು ಅಭ್ಯರ್ಥಿಗಳು ಕಲೆ, ವಿಜ್ಞಾನ ಅಥವಾ ಕಾಮರ್ಸ್ ವಿಷಯಗಳೊಂದಿಗೆ ಇಂಟರ್‌ಮೀಡಿಯಟ್ / 10+2 / ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ ಒಟ್ಟಾರೆ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಹೆಚ್ಚಿನ ಮಾಹಿತಿಗೆ ಏರ್‌ಮನ್ ಆಯ್ಕೆ ಕೇಂದ್ರ, ನಂ.1, ಕಬ್ಬನ್ ರಸ್ತೆ, ಬೆಂಗಳೂರು - 560 001 ದೂರವಾಣಿ ಸಂಖ್ಯೆ 080 -2559 2199 ಸಂಪರ್ಕಿಸಬಹುದಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+