ಇಂಟರ್ನೆಟ್ ಎಕ್ಸ್ ಪ್ಲೋರರ್ ಗೆ ವಿಷಮ ಜ್ವರ

Internet Explorer
ಲಂಡನ್, ಡಿ.17: ಇಂಟರ್ನೆಟ್ ಎಕ್ಸ್ ಪ್ಲೋರರ್(IE) ಬಳಸುತ್ತಿರುವ ನೆಟ್ಟಿಗರು ತಕ್ಷಣವೆ ಬೇರೆ ಬ್ರೌಸರ್ ಗಳನ್ನು ಬಳಸಬೇಕು ಎಂದು ಅಂತರ್ ಜಾಲ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಐಇ ಬ್ರೌಸರ್ ನಲ್ಲಿ ಕ್ಲಿಷ್ಟಕರವಾದ ಸಮಸ್ಯೆ ತಲೆ ಎತ್ತಿದ್ದು ಅದನ್ನು ಪರಿಹರಿಸುವ ಪ್ರಯತ್ನದಲ್ಲಿ ನಿರತರಾಗಿದ್ದೇವೆ ಎಂದು ಮೈಕ್ರೊಸಾಫ್ಟ್ ಸಂಸ್ಥೆ ತಿಳಿಸಿರುವ ಹಿನ್ನೆಲೆಯಲ್ಲಿ ತಜ್ಞರು ಈ ಎಚ್ಚರಿಗೆ ನೀಡಿದ್ದಾರೆ.

ಪ್ರಸ್ತುತ ವಿಶ್ವದಾದ್ಯಂತ ಶೇ.69.8ರಷ್ಟು ನೆಟ್ಟಿಗರು ಅಂತರ್ಜಾಲದಲ್ಲಿ ಜಾಲಾಡಲು ಐಇಯನ್ನೇ ನೆಚ್ಚಿಕೊಂಡಿದ್ದಾರೆ. ಐಇ ಬ್ರೌಸರ್ ನಲ್ಲಿ ಉಂಟಾಗಿರುವ ದೋಷ ಹ್ಯಾಕರ್ ಗಳಿಗೆ ವರವಾಗಲಿದೆ. ಗಣಕಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಪಾಸ್ ವರ್ಡ್ ನಂತಹ ಮುಖ್ಯ ದಾಖಲೆಗಳನ್ನು ಕಳುವು ಮಾಡುವ ಸಾಧ್ಯತೆಗಳಿವೆ ಎಂದು ಎಚ್ಚರಿಸಲಾಗಿದೆ.

ಸಮಸ್ಯೆಯನ್ನು ಪರಿಷ್ಕರಿಸುವ ತನಕ ನೆಟ್ಟಿಗರು ಫೈರ್ ಫಾಕ್ಸ್, ಸಫಾರಿ, ಒಪೆರಾ ಮುಂತಾದ ಬ್ರೌಸರ್ ಗಳನ್ನು ಉಪಯೋಗಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ. ಒಂದು ವೇಳೆ ಇಂಟರ್ನೆಟ್ ಎಕ್ಸ್ ಪ್ಲೋರರ್ ಆವೃತ್ತಿ 7 ಅಥವಾ ಐಇ 8 ಬೀಟಾ ಆವೃತ್ತಿಯನ್ನು ಬಳಸುವವರು ಪ್ರೊಟೆಕ್ಟೆಡ್ ಮೋಡನ್ನು ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಐಇಯಲ್ಲಿನ ದೋಷವನ್ನು ಪರಿಹರಿಸಲು ಇಂದು emergency patch ಬಿಡುಗಡೆ ಮಾಡುವುದಾಗಿ ಮೈಕ್ರೊಸಾಫ್ಟ್ ಸಂಸ್ಥೆ ತಿಳಿಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+