ಕೋಳಿ ತಿನ್ನುವ ಬಾಯಿಗೆ ಬೀಗ ಹಾಕಿ ಪ್ಲೀಸ್

ಕೊಲ್ಕತ್ತಾ, ಡಿ. 16 : ಕೋಳಿ ತಿನ್ನುವ ಮಂದಿಗೆ ಕಹಿ ಸುದ್ದಿಯೊಂದು ದೂರದ ಅಸ್ಸಾಂ ಮತ್ತು ಪಶ್ಚಿಮ ಬಂಗಾಲದಿಂದ ದೇಶಾದ್ಯಂತ ಹರಡತೊಡಗಿದೆ. ಇಷ್ಟು ದಿನ ಅಸ್ಸಾಂ ರಾಜ್ಯಕ್ಕ ಮಾತ್ರ ಸೀಮಿತವಾಗಿದ್ದ ಹಕ್ಕಿ ಜ್ವರ ಇದೀಗ ಪಶ್ಚಿಮ ಬಂಗಾಲಕ್ಕೂ ಹರಡಿದೆ, ನಾಳೆ, ನಾಡಿದ್ದೂ ಬೆಂಗಳೂರಿಗೂ ಬರುವ ಸಾಧ್ಯತೆ ಇದೆ. ಇದರಿಂದ ಕೋಳಿ ತಿನ್ನುವ ಬಾಯಿಗೆ ಕೆಲ ದಿನಗಳ ಮಟ್ಟಿಗೆ ಬೀಗ ಹಾಕಿದರೆ ಛೆಲೋ ಆಗುತ್ತೆ ನೋಡ್ರೀ.

ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಸಾವಿರಾರು ಜ್ವರ ಪೀಡಿತ ಕೋಳಿಗಳನ್ನು ಕೊಲ್ಲಲಾಗಿದೆ., ಅಸ್ಸಾಂದಲ್ಲಂತೂ ಕೋಳಿಗಳ ಮಾರಣಹೋಮ ನಡೆದ ವಾರದ ಕಳೆದು ಹೋಗಿದೆ. ಲಕ್ಷಾಂತರ ಕೋಳಿಗಳು ಜ್ವರದ ಬಾಧೆಯಿಂದ ಸತ್ತು ಹೋಗಿವೆ. ಹಾಗೂ ಜ್ವರ ಪೀಡಿತ ಕೋಳಿಗಳನ್ನು ಹಿಡಿದು ಕೊಲ್ಲಲು ಸರ್ಕಾರ ಆದೇಶ ನೀಡಿದೆ.

ಏವಿಯನ್ ಇನ್ ಪ್ಲುಯಂಜಾ ಎಂಬ ಕೀಟಾಣುವಿನಿಂದ ಕೋಳಿ ಜ್ವರ ಬರಲು ಕಾರಣವಾಗಿದೆ. ಅಸ್ಸಾಂ ರಾಜ್ಯವೊಂದರಲ್ಲಿಯೇ ಈಗಾಗಲೇ 4 ಮಿಲಿಯನ್ ಗೂ ಹೆಚ್ಚೂ ಕೋಳಿಗಳು ಸತ್ತಿವೆ ಎಂದು ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ. ಕೋಳಿ ಜ್ವರದಿಂದ ಮನುಷ್ಯರು ಮೃತಪಟ್ಟಿರುವ ಬಗ್ಗೆ ವರದಿಯಾಗಿಲ್ಲ. ವಿಶ್ವದಾದ್ಯಂತ ಕೋಳಿ ಜ್ವರಕ್ಕೆ 246 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರದ ವರದಿಗಳು ತಿಳಿಸಿವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+