ಜಮಾತೆ ಉದ್ ದವಾ ನಿಷೇಧಕ್ಕೆ ಪಾಕ್ ಆಸಕ್ತಿ
ಇಸ್ಲಾಮಾಬಾದ್, ಡಿ. 10 : ವಿಶ್ವಸಂಸ್ಥೆ ಭದ್ರತಾ ಕಚೇರಿಯು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೊಯ್ಬಾದ ಬೆಂಬಲ ನೀಡುತ್ತದೆ ಎಂದು ಹೇಳಲಾದ ಜಮಾತೆ ಉಲ್ ದವಾ ಸಂಘಟನೆಯನ್ನು ನಿಷೇಧಿಸಲು ಸೂಚನೆ ನೀಡಿದಲ್ಲಿ ಅದರ ಚಿಂತನೆ ನಡೆಸಲಾಗುವುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನದ ವಿಶ್ವಸಂಸ್ಥೆಯ ವಕ್ತಾರ ಅಬ್ಧುಲ್ ಹುಸೇನ್ ಹರೂನ್ ಈ ವಿಷಯವನ್ನು ತಿಳಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಕಚೇರಿಗೆ ಭಾರತ ಸರ್ಕಾರವು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಮಾತೆ ಉದ್ ದವಾ ಸಂಘಟನೆಯನ್ನು ನಿಷೇಧಿಸಬೇಕು ಎಂದು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹೀಗಾದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಕಚೇರಿ ಭಾರತದ ಮನವಿಯನ್ನು ಪುಸಸ್ಕರಿಸಿದಲ್ಲಿ ಜಮಾತೆ ಉದ್ ದವಾ ಸಂಘಟನೆ ನಿಷೇಧಕ್ಕೆ ಪಾಕ್ ಸರ್ಕಾರ ಮುಂದಾಗಲಿದೆ ಎಂದು ಹರೂನ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಜಮಾತೆ ಉದ್ ದವಾ ಸಂಘಟನೆಯ ಬ್ಯಾಂಕ್ ಅಕೌಂಟ್ ನ್ನು ಕೂಡಾ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಇನ್ನೂ 20 ಉಗ್ರರಿದ್ದಾರೆ ಎಚ್ಚರಿಕೆ!:ನ್ಯೂ. ಟೈಮ್ಸ್












Click it and Unblock the Notifications