ಉಗ್ರರ ವಿರುದ್ಧ ಪಾಕ್ ದಾಳಿ, ಅಮೆರಿಕ ಸಂತಸ
ವಾಷಿಂಗ್ ಟನ್, ಡಿ. 9 : ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಪಾಕಿಸ್ತಾನದ ಕ್ರಮವನ್ನು ಅಮೆರಿಕ ಮುಕ್ತ ಕಂಠದಿಂದ ಪ್ರಶಂಸಿಸಿದೆ. ಸಿಎನ್ ಎನ್ ವಾರ್ತಾ ವಾಹಿನಿಯೊಂದರ ನೇರ ಪ್ರಸಾರ ಮಾತನಾಡಿದ ಅಮೆರಿಕ ವಿದೇಶಾಂದ ಕಾರ್ಯದರ್ಶಿ ಕಾಂಡೋಲಿಜಾ ರೈಸ್, ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕಾರ್ಯಾಚರಣೆ ಆರಂಭಿಸಿರುವುದು ಐತಿಹಾಸಿಕ ಕ್ರಮವಾಗಿದೆ ಎಂದು ಕೊಂಡಾಡಿದ್ದಾರೆ.
ಇತ್ತೀಚೆಗೆ ಭಾರತದಲ್ಲಿ ನಡೆದ ಭಯೋತ್ಪಾದನೆ ಹೆಸರಿಸಿ ಮಾತನಾಡಿದ ರೈಸ್, ಲಷ್ಕರ್ ಇ ತೊಯ್ಬಾ ಸಂಘಟನೆ ನೆಲೆಯ ಮೇಲೆ ದಾಳಿ ನಡೆಸಿ ಮೌಲಾನ ಮಾಸೂದ್ ಅಜರ್ ಹಾಗೂ ಝಾಕೀರ್ ರೆಹೆಮಾನ್ ಸೇರಿದಂತೆ 21 ಮಂದಿ ಭಯೋತ್ಪಾಕರನ್ನು ಬಂಧಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಾಕಿಸ್ತಾನ ಸರ್ಕಾರ ಆರಂಭಿಸಿರುವ ಈ ಕಾರ್ಯಾಚರಣೆಯಲ್ಲಿ ಉಗ್ರರ ಸಂಘಟನೆಗಳ ಪ್ರದೇಶಗಳು ನಾಶವಾಗುವವರೆಗೂ ದಾಳಿ ಮುಂದುವರೆಸಬೇಕು ಎಂದು ರೈಸ್ ಅಭಿಪ್ರಾಯಪಟ್ಟರು.
ಭಯೋತ್ಪಾದನೆ ಹತ್ತಿಕ್ಕುವಲ್ಲಿ ಅಮೆರಿಕದೊಂದಿಗೆ ಪಾಕಿಸ್ತಾನ ಕೈಜೋಡಿಸಿದೆ. ಆಲ್ ಖೈದಾ ಜೊತೆಗೆ ಸಂಪರ್ಕ ಹೊಂದಿರುವ ಅನೇಕ ಉಗ್ರರು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ಎಲ್ಲ ಉಗ್ರರ ನಾಶವಾಗುವವರೆಗೂ ಪಾಕಿಸ್ತಾನ ತನ್ನ ಕಾರ್ಯಾಚರಣೆಯನ್ನು ಕೈ ಬಿಡುವುದಿಲ್ಲ ಎಂದು ಅಮೆರಿಕ ನಂಬಿದೆ. ತಮ್ಮ ನಂಬಿಕೆಯನ್ನು ಪಾಕಿಸ್ತಾನದ ಪ್ರಧಾನಮಂತ್ರಿ ರಾಜಾ ಯೂಸೆಫ್ ಗಿಲಾನಿ ಹಾಗೂ ಆಸೀಫ್ ಅಲಿ ಜರ್ದಾರಿ ಉಳಿಸಿಕೊಳ್ಳುತ್ತಾರೆ ಎಂದು ರೈಸ್ ವಿಶ್ವಾಸ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)
ಕಂದಹಾರ್ ಅಪಹರಣ;ಮಾಸೂದ್ ಅಜರ್ ಸೆರೆ












Click it and Unblock the Notifications