ಭಾರತಕ್ಕೆ ಸಹಕರಿಸಲು ಪಾಕ್ ಗೆ ರೈಸ್ ತಾಕೀತು
ಇಸ್ಲಾಮಾಬಾದ್, ಡಿ. 4 : ತಳಮಟ್ಟದಿಂದ ಭಯೋತ್ಪಾದನೆಯನ್ನು ಕಿತ್ತು ಹಾಕಲು ಭಾರತಕ್ಕೆ ಪಾಕಿಸ್ತಾನ ಸಂಪೂರ್ಣ ಸಹಕಾರ ನೀಡಬೇಕೆಂದು ಅಮೆರಿಕದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಕಾಂಡೋಲಿಜಾ ರೈಸ್ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರಿದ್ದಾರೆ.
ಇಂದು ಇಸ್ಲಾಮಾಬಾದ್ ನಲ್ಲಿ ಸೇನಾಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಮಹತ್ವದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈಸ್, ಕಳೆದ ವಾರ ಮುಂಬೈ ನಲ್ಲಿ ನಡೆದ ಭಯೋತ್ಪಾದನೆ ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿದ್ದಾರೆ. ಭಯೋತ್ಪಾದನೆ ಜಾಗತಿಕ ಸಮಸ್ಯೆ ಇದನ್ನು ಮಟ್ಟಹಾಕಲು ಪಾಕ್ ಸರ್ಕಾರ ಮುಂದೆ ಬರಬೇಕು. ಇದು ಅಮೆರಿಕದ ಕಳಕಳ ಹಾಗೂ ಒತ್ತಾಯವಾಗಿದೆ.
ಅಮೆರಿಕ, ಭಾರತ ಹಾಗೂ ಪಾಕಿಸ್ತಾನದಲ್ಲೂ ಭಯೋತ್ಪದಕರ ಹಾವಳಿ ಮೀತಿಮೀರಿದೆ. ಅದ್ದರಿಂದ ಇದನ್ನು ಬೇರು ಮಟ್ಟದಿಂದ ಕಿತ್ತುಹಾಕಲು ಪಕ್ಕದ ದೇಶಗಳಿಗೆ ಸಹಕಾರ ನೀಡುವುದು ಅಗತ್ಯ ಎಂದು ಕಿವಿ ಮಾತು ಹೇಳಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನದಿಂದ ಸಕಾರಾತ್ಮಕ ಉತ್ತರ ಬಂದಿದೆ ಎಂದು ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ: ದೆಹಲಿಯಲ್ಲಿ ಕಾಂಡೋಲೀಜಾ ಸುದ್ದಿಗೋಷ್ಠಿ












Click it and Unblock the Notifications