ಹೊನ್ನಾಳಿ ಉಗ್ರ ಗೌಸ್, ಕಸಬ್ ಸ್ನೇಹಿತರು

ಬೆಂಗಳೂರು, ಡಿ. 4 : ಕಳೆದ ವರ್ಷ ಹೊನ್ನಾಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಶಂಕಿತ ಉಗ್ರ ಮೊಹ್ಮದ್ ಗೌಸ್ ಗೂ ಮುಂಬೈ ಭಯೋತ್ಪಾದನೆಯಲ್ಲಿ ಸೆರೆ ಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ಇಬ್ಬರೂ ಸಹಪಾಠಿಗಳು. ಇಂತದ್ದೊಂದು ಮಹತ್ವದ ಅಂಶ ತನಿಖೆ ವೇಳೆಯಲ್ಲಿ ಬಯಲಾಗಿದೆ.

2005 ರಿಂದ 2007ರ ವರೆಗೆ ಪಾಕ್ ಆಕ್ರಮಿಕ ಕಾಶ್ಮೀರದ ಮುಜಾಫರಬಾದ್ ನಲ್ಲಿ ಮೊಹ್ಮದ್ ಗೌಸ್ ಮತ್ತು ಕಸಬ್ 'ಫಿದಾಯಿನ್' ತರಬೇತಿ ಪಡೆದಿರುವ ಬಗ್ಗೆ ಮಹಾರಾಷ್ಟ್ರ ಎಟಿಎಸ್ ಪೊಲೀಸರಿಗೆ ಲಭ್ಯಲಾಗಿದೆ. ಹುಬ್ಬಳ್ಳಿಯ ಅಸಾದುಲ್ಲಾ ಜತೆಗೆ ಹೊನ್ನಾಳಿಯಲ್ಲಿ ಸಿಕ್ಕಿಬಿದ್ದಿರುವ ಮೊಹ್ಮದ್ ಗೌಸ್ ವಿಚಾರಣೆ ಸಂಧರ್ಭದಲ್ಲಿ ಸಿಓಡಿ ಪೊಲೀಸರಿಗೆ ಬಹಿರಂದ ಪಡಿಸಿದ ಹೇಳಿಕೆಗೂ, ಅಜ್ಮಲ್ ಕಸಬ್ ನೀಡುತ್ತಿರುವ ಹೇಳಿಕೆಗೂ ತುಂಬಾ ಸಾಮ್ಯತೆ ಇದೆ. ಅಲ್ಲದೇ ಈ ಇಬ್ಬರು ಜೆಡ್ಡಾ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಅಬು ಹಮ್ಜಾನ ಮೂಲಕ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರ್ಪಡೆಗೊಂಡಿದ್ದರು.

ಇದರೊಂದಿಗೆ ಉಗ್ರರ ಕರ್ನಾಟಕದ ನಂಟು ಖಚಿತವಾಗಿದೆ. ಮಹಾರಾಷ್ಟ್ರ ಎಟಿಎಸ್ ಪೊಲೀಸರು ಮೊಹ್ಮದ್ ಗೌಸ್ ವಿಚಾರಣೆ ತಿಳಿದಿರುವ ಅಂಶಗಳನ್ನು ನೀಡುವಂತೆ ರಾಜ್ಯ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಮೊಹ್ಮದ್ ಗೌಸ್ ನೌಕಾ ಸಮರ, ಮರಭೂಮಿ ಸಮರ ಹಾಗೂ ಅರಣ್ಯ ಪ್ರದೇಶಗಳಲ್ಲಿ ಯುದ್ದ ಮಾಡುವುದು, ಸ್ಫೋಟಕ ಬಳಕೆ ಮತ್ತು ಪೊಲೀಸರ ಜಾಡು ತಪ್ಪಿಸುವುದು ಸೇರಿದಂತೆ ಅನೇಕ ತರಬೇತಿಗಳನ್ನ ಪಡೆದಿದ್ದಾರೆ. ಎರಡು ವರ್ಷ ಕಠಿಣ ತರಬೇತಿ ಪಡೆದವರು ಕಮಾಂಡೋಗಳಷ್ಟೆ ಸಮರ್ಥರಾಗಿತ್ತಾರೆ ಎಂದು ಸಿಓಡಿ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+