ಉಗ್ರರ ದಾಳಿಯಲ್ಲಿ ಸತ್ತವರ ರಕ್ತಸಿಕ್ತ,ಲೆಕ್ಕ

ವಾಷಿಂಗ್ ಟನ್, ಡಿ. 3 :ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಅಧ್ಯಯನ ಕೇಂದ್ರದ (US National Consortium for the Study of Terrorism and Responses to Terrorism(START) ಪ್ರಕಾರ 1970 ರಿಂದ 2004ರ ವರೆಗೆ ಭಾರತದಲ್ಲಿ 4100 ಭಯೋತ್ಪಾದನಾ ದಾಳಿಗಳಾಗಿವೆ. ದಾಳಿಯಲ್ಲಿ 12 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶ ಬಿಡುಗಡೆ ಆಗಿದೆ.

ಸಿಮಿ ಸಂಘಟನೆ ಸೇರಿದಂತೆ ಭಾರತದಲ್ಲಿ ಸುಮಾರು 54 ಉಗ್ರರ ಸಂಘಟನೆಗಳು ಕಾರ್ಯನಿರತವಾಗಿವೆ. 12,500 ಹೆಚ್ಚು ಮಂದಿ ಭಯೋತ್ಪಾದನೆ ಕೃತ್ಯಕ್ಕೆ ಈಡಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂದರೆ ಪ್ರತಿ ವರ್ಷ ಭಾರತದಲ್ಲಿ 360 ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ವರೆಗೆ ಅತೀ ಹೆಚ್ಚು ಅಂದರೆ 1991 ರಲ್ಲಿ 1184 ಮಂದಿ ಹಾಗೂ 1993ರಲ್ಲಿ 1132 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮೇರಿಲ್ಯಾಂಡ್ ವಿಶ್ವವಿದ್ಯಾಲಯ ಸ್ಪಷ್ಟಪಡಿಸಿದೆ.

ಆದರೆ ಭಾರತದ ಅಂಕಿ ಅಂಶಗಳ ಪ್ರಕಾರ ಈವರೆಗೊ ಸುಮಾರು 70 ಸಾವಿರ ಅಮಾಯಕ ಭಾರತೀಯರು ಭಯೋತ್ಪಾದನಾ ಕೃತ್ಯದಲ್ಲಿ ಅಸುನೀಗಿದ್ದಾರೆ, ಅಷ್ಟೆ.
(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+