ನವದೆಹಲಿ ವಿಮಾನ ನಿಲ್ದಾಣ ಸ್ಫೋಟ ಬೆದರಿಕೆ
ನವದೆಹಲಿ, ಡಿ. 1 : ಮುಂಬೈ ಭಯೋತ್ಪಾದನೆ ಬೆನ್ನೆಲ್ಲೇ ದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಫೋಟಿಸುವ ಬೆದರಿಕೆಯ ಇಮೇಲೊಂದು ಬಂದಿರುವ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಹೊರಗೆ ಮತ್ತು ಒಳಗೆ ಭಾರಿ ಭದ್ರತೆಯನ್ನು ನಿಯೋಜಿಸಲಾಗಿದೆ.
ವಿಮಾನ ನಿಲ್ದಾಣಕ್ಕೆ ಬರುವ ಹಾಗೂ ಹೋಗುವ ವ್ಯಕ್ತಿಗಳ ಮತ್ತು ವಾಹನಗಳ ಮೇಲೆ ಹದ್ದಿನ ಇಡಲಾಗಿದ್ದು, ಸಾಕಷ್ಟು ಭದ್ರತೆಯನ್ನು ಒದಗಿಸಲಾಗಿದೆ. ಮುಂಬೈ ಭಯೋತ್ಪಾದನೆಯ ಮಾದರಿಯಲ್ಲೆ ದಾಳಿ ನಡೆಸುವ ಸಾಧ್ಯತೆಗಳಿರುವದರಿಂದ ವಿಮಾನ ನಿಲ್ದಾಣದ ತುಂಬೆಲ್ಲಾ ಖಾಕಿ ಪಡೆಗಳ ಸದ್ದು ಕೇಳಿಸತೊಡಗಿದೆ. ಪೊಲೀಸರ ಕಣ್ಣು ತಪ್ಪಿಸಿ ಕೃತ್ಯ ಎಸಗುವ ಸಾಧ್ಯತೆಗಳು ಕಡಿಮೆ ಇವೆ. ಭದ್ರತೆ ಹೆಚ್ಚಾಗಿದ್ದರಿಂದ ಪ್ರಯಾಣಿಕರಿಗೆ ಕಿರಿಕಿರಿ ಎನಿಸಿದ್ದು, ಭದ್ರತಾ ದೃಷ್ಟಿಯಿಂದ ಅನಿವಾರ್ಯ ಈ ಕೆಲಸ ಮಾಡಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications