ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು ನಗರ ಬಸ್ ನಿಲ್ದಾಣ ಬದಲಾವಣೆ

By Staff
|
Google Oneindia Kannada News

ಮೈಸೂರು, ಡಿ.1: ಮೈಸೂರು ನಗರ ವಾಹನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಯು ನರ್ಮ್ ಯೋಜನೆಯಡಿಯಲ್ಲಿ ಪ್ರಾರಂಭವಾಗಿದ್ದು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ, ಸದರಿ ವಾಹನ ನಿಲ್ದಾಣದಿಂದ ಕಾರ್ಯಾಚರಣೆಯಾಗುತ್ತಿದ್ದ ನಗರ ಸಾರಿಗೆಗಳನ್ನು ಡಿ.1 ರಿಂದ ಕಾಡಾ ಕಛೇರಿ ಆವರಣ ಮತ್ತು ಅರಮನೆಯ ದಕ್ಷಿಣ ಭಾಗದ ಪ್ರವಾಸಿಗರ ವಾಹನ ನಿಲುಗಡೆಯ ಸ್ಥಳದಿಂದ ಕಾರ್ಯಾಚರಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಕಾಡಾ ಕಛೇರಿಯ ಆವರಣದಿಂದ ಕಾರ್ಯಾಚರಣೆಯಾಗುವ ಫ್ಲಾಟ್ ಫಾರಂ ಮತ್ತು ಸ್ಥಳಗಳ ವಿವರ:
ಪ್ಲಾಟ್ ಫಾರಂ 1: ರಾಮಕೃಷ್ಣನಗರ, ಕುವೆಂಪುನಗರ, ಸರಸ್ವತಿಪುರಂ, ಜಯನಗರ, ಬೋಗಾದಿ, ಟಿ.ಕೆ. ಬಡಾವಣೆ, ಕನಕದಾಸನಗರ, ಆಂದೋಲನಾ ವೃತ್ತ, ವಿವೇಕಾನಂದ ವೃತ್ತ, ಶ್ರೀರಾಂಪುರ, ಬಿ.ಇ.ಎಂ.ಎಲ್, ಬಡಾವಣೆ.

ಪ್ಲಾಟ್ ಫಾರಂ3: ಜೆ.ಪಿ.ನಗರ, ರಮಾಬಾಯಿನಗರ, ಶ್ರೀರಾಂಪುರ. ಸ್ಟರ್‌ಲಿಂಗ್ ಟಾಕೀಸ್, ವಿದ್ಯಾರಣ್ಯಪುರಂ, ಗೊರೂರು, ವಿವೇಕಾನಂದ ವೃತ್ತ, ಅಕ್ಷಯ ಭಂಡಾರ್, ಕೆ.ಇ.ಬಿ ಕಾಂಪ್ಲೆಕ್ಸ್, ಶಾಂತಿಸಾಗರ.

ಪ್ಲಾಟ್‌ಫಾರಂ 4: ಸಿದ್ಧಾರ್ಥ ಬಡಾವಣೆ, ಮಿಲ್ಕ್ ಡೈರಿ, ಜಾಕಿ ಕ್ವಾಟರ್‍ಸ್, ಕಲ್ಯಾಣಗಿರಿ ನಗರ, ತ್ರಿವೇಣಿ ವೃತ್ತ, ರಾಘವೇಂದ್ರನಗರ, ಶಕ್ತಿನಗರ, ಜೆ.ಎಸ್.ಎಸ್ ಬಡಾವಣೆ, ರಾಧಾಕೃಷ್ಣನಗರ, ಟೆರಿಷಿಯನ್ ಕಾಲೇಜ್,

ಮೈಸೂರು ಅರಮನೆ ದಕ್ಷಿಣ ಭಾಗದ ಪ್ರವಾಸಿಗರ ವಾಹನ ನಿಲುಗಡೆಯ ಸ್ಥಳದಿಂದ ಕಾರ್ಯಾಚರಣೆಯಾಗವ ಫ್ಲಾಟ್ ಫಾರಂ ಮತ್ತು ಸ್ಥಳಗಳ ವಿವರ:-
ಪ್ಲಾಟ್ ಫಾರಂ 2: ಕೆ.ಆರ್ ಆಸ್ಪತ್ರೆ, ರೈಲ್ವ್ವೆ ನಿಲ್ದಾಣ, ವಾಣಿವಿಲಾಸಪುರಂ, ಹೆಬ್ಬಾಳ್, ಇನ್‌ಫೋಸಿಸ್, ವಿಪ್ರೋ, ಗೋಕುಲಂ, ವಿಜಯನಗರ, ಮೇಟಗಳ್ಳಿ, ಭಾರತ್ ಕ್ಯಾನ್ಸರ್ ಆಸ್ಪತ್ರೆ, ಕುಂಬಾರಕೊಪ್ಪಲು, ಜಯಲಕ್ಷ್ಮಿಪುರಂ.

ಪ್ಲಾಟ್ ಫಾರಂ 5: ಆರ್. ಎಸ್. ನಾಯ್ಡುನಗರ, ಕೆಸರೆ. ಎನ್.ಆರ್ ಮೊಹಲ್ಲಾ, ಎಫ್.ಟಿ.ಎಸ್. ಉದಯಗಿರಿ, ಶಾಂತಿನಗರ, ರಾಜೀವನಗರ, ಬೀಡಿ ಕಾಲೋನಿ, ಸಾತಗಳ್ಳಿ, ಕಲ್ಯಾಣಗಿರಿನಗರ.

ಪ್ಲಾಟ್ ಫಾರಂ 5ಎ: ತಿಲಕನಗರ, ಶಾಲಿಮಾರ್, ಹೈವೇ ವೃತ್ತ, ಬನ್ನಿಮಂಟಪ, ಬಿ.ಎಂ.ಶ್ರೀ ನಗರ, ಸಿದ್ದೀಖ್ ನಗರ.

ಸಾರ್ವಜನಿಕ ಪ್ರಯಾಣಿಕರಿಗೆ ನಿಲ್ದಾಣದ ಸ್ಥಳಾಂತರದಿಂದ ಉಂಟಾಗುವ ಅನನುಕೂಲಕ್ಕೆ ವಿಷಾದವನ್ನು ವ್ಯಕ್ತಪಡಿಸುತ್ತಾ, ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸುತ್ತಿರುವ ನೂತನ ಬಸ್ ನಿಲ್ದಾಣದ ಕಾಮಗಾರಿಯು ಸುಗಮವಾಗಿ ನಡೆಯಲು ಎಲ್ಲಾ ರೀತಿಯಿಂದಲೂ ಸಹಕರಿಸಬೇಕೆಂದು ಮೈಸೂರು ನಗರ ವಿಭಾಗ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್. ಶ್ರೀನಿವಾಸ್ ವಿನಂತಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X