ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ನಾನೇ

By Staff
|
Google Oneindia Kannada News

ನವದೆಹಲಿ, ನ. 17 : ರಾಜ್ಯದ ಅಭಿವೃದ್ಧಿಯೇ ನನ್ನ ಏಕೈಕ ಆದ್ಯತೆ. ಟೀಕಾಕಾರರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಸರ್ಕಾರವನ್ನು ಅಭದ್ರಗೊಳಿಸಲು ಕೆಲವರು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ. ಇದರಲ್ಲಿ ಅವರು ಖಂಡಿತವಾಗಿಯೂ ಯಶಸ್ವಿಯಾಗುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರಿಗೆ ಎದಿರೇಟು ನೀಡಿದರು.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನ ಇವರನ್ನು ಮೂರನೇ ಸ್ಥಾನಕ್ಕೆ ತಳ್ಳಿರುವುದು ಏಕೆ ಎಂದು ಅವಲೋಕನ ಮಾಡಿಕೊಂಡು ಮುಂದೆ ಸಾಗಬೇಕಿದೆ ಎಂದರು. ಅನನುಭವಿ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದು ನಾನೇ, ಆ ಸಮಯದಲ್ಲಿ ನನ್ನ ಬೆಂಬಲವಿಲ್ಲದೇ ಹೋಗಿದ್ದರೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಸಾಧ್ಯವಿರಲಿಲ್ಲ. ಅಲ್ಲದೆ ಈ ಜನ್ಮದಲ್ಲಿ ಅವರಿಗೆ ಮುಖ್ಯಮಂತ್ರಿ ಪೀಠ ಕನಸಿನ ಮಾತಾಗುತ್ತಿತ್ತು. ಅಂತಹ ಅದ್ಭುತ ಗಳಿಗೆಯನ್ನು ಒದಗಿಸಿಕೊಟ್ಟ ನನಗೆ ತಂದೆ ಮಕ್ಕಳು ಬೀದಿ ಬೀದಿಯಲ್ಲಿ ಟೀಕೆ ಮಾಡುತ್ತಿರುವುದನ್ನು ಜನರು ನೋಡಿಕೊಳ್ಳತ್ತಾರೆ ಎಂದು ತೀವ್ರ ಆಕ್ರೋಷ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಮಂತ್ರಿ ಎಂಬುದನ್ನು ಮರೆತಿರುವ ದೇವೇಗೌಡ ಕೆಳ ದರ್ಜೆ ರಾಜಕಾರಣಕ್ಕೆ ಇಳಿದಿದ್ದಾರೆ. ಈ ಇತಿಹಾಸ ರಾಜ್ಯದ ಜನತೆ ಗೊತ್ತಿದೆ. ಕಳೆದ ಚುನಾವಣೆಯಲ್ಲಿ ಜನರೇ ಇವರ ಜನ್ಮ ಜಾಲಾಡಿರುವುದನ್ನು ಮರೆತಿರುವ ಅವರು, ಮತ್ತೆ ಮತ್ತೆ ಸರ್ಕಾರ ಬೀಳಿಸುವ ಸಾಹಸಕ್ಕೆ ಕೈಹಾಕುತ್ತಿರುವುದು ಹಿರಿಯ ರಾಜಕಾರಣಿ ಮಾಡುವ ಕೆಲಸವಲ್ಲ ಎಂದು ಕಿಡಿಕಾರಿದರು.

ನಾನು ಪ್ರಧಾನಿಯಾಗಿದ್ದರೆ ಆರ್ಎಸ್ಎಸ್ ನಿಷೇಧ ಮಾಡುತ್ತಿದ್ದೆ ಎಂದು ದೇವೇಗೌಡ ಹತಾಶ ಹೇಳಿಕೆ ನೀಡುತ್ತಿದ್ದಾರೆ. ಅದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿದ್ದುಕೊಂಡು ಅಜಾತಶತೃ ರಾಜಕಾರಣಿ ಎನಿಸಿರುವ ಅಟಲ್ ಬಿಹಾರಿ ವಾಜಪೇಯಿ ಈ ದೇಶದ ಪ್ರಧಾನಮಂತ್ರಿ ಆಗಿದ್ದಾರೆ. ಅದೇ ಸಂಧಟನೆಯಲ್ಲಿದ್ದುಕೊಂಡು ನಾನು ಕೂಡಾ ಕರ್ನಾಟಕದ ಮುಖ್ಯಮಂತ್ರಿಯಾಗಿರುವೆ. ಅವರಲ್ಲಿ ಅಷ್ಟೊಂದು ಶಕ್ತಿ ಈ ಸಾಹಸಕ್ಕೆ ಮುಂದಾಗಲಿ ಎಂದು ಪ್ರತಿ ಸವಾಲು ಹಾಕಿದರು.

ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ದಿನಕ್ಕೊಂದು ಹೇಳಿಕೆ ನೀಡುತ್ತ ಕಾಲ ಕಳೆಯುತ್ತಿರುವ ಜೆಡಿಎಸ್ ಮುಖಂಡರು ಕಳೆದ ಚುನಾವಣೆಯಲ್ಲಿ ಬುದ್ಧಿ ಕಲಿತಿಲ್ಲ. ಅಧಿಕಾರವಿಲ್ಲ ಮನೆಯಲ್ಲಿ ಕುಳಿರುವ ಅವರು ಕೆಲಸವಿಲ್ಲದ ಬಡಿಗಯಂತಾಗಿದ್ದಾರೆ. ಅಧಿಕಾರ ಶಾಶ್ವತವಲ್ಲ ಎನ್ನುವ ಅರಿವು ನನಗೂ ಇದೆ. ನನ್ನನ್ನು ಯಾರು ಏನೂ ಮಾಡಲಿಕ್ಕೆ ಸಾಧ್ಯವಿಲ್ಲ. ಇಂತಹ ಹೆದರಿಸುವ ಹೇಳಿಕೆಯಿಂದ ಎಂದೂ ಧೃತಿಗೆಡುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು. ಸಂದರ್ಶನವೊಂದರಲ್ಲಿ ಅಧಿಕಾರ ಶಾಶ್ವತವಲ್ಲ. ಅವಧಿ ಮುಗಿಯಲಿ ನೋಡೋಣ ಎಂದು ಸವಾಲಿನ ರೀತಿಯಲ್ಲಿ ದೇವೇಗೌಡರು ಮಾತನಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X