ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೀನಿಕ್ಸ್ ಪಕ್ಷಿಯಂತೆ ಎದ್ದು ಬರುವೆ: ಎಚ್ ಡಿಕೆ

By Staff
|
Google Oneindia Kannada News

ಬೆಂಗಳೂರು, ನ. 17 : ರಾಜ್ಯದಲ್ಲಿ ಕೋಮುವಾದಿ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲು ಕಾಂಗ್ರೆಸ್ ನಾಯಕರ ವರ್ತನೆಗಳೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದರು.

ನಗರದ ಅರಮನೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾಯಕಲ್ಪ ಪ್ರತಿಜ್ಞಾ ಸಮಾವೇಶದಲ್ಲಿ ಜೆಡಿಎಸ್ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಆಡಳಿತರೂಢ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಮುಖಂಡರ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಧರ್ಮಸಿಂಗ್ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಕೆಲವು ನಾಯಕರು ವರ್ತಿಸಿದ ರೀತಿ ಹಾಗೂ ಸರ್ವಾಧಿಕಾರಿ ಮನೋಭಾವನೆಯಿಂದ ಜೆಡಿಎಸ್ ಒಡೆಯಲು ಕಾರಣವಾಯಿತು ಎಂದು ನೇರ ಆರೋಪ ಮಾಡಿದರು.

ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ಕಾರಣ ಎಂದು ಕಾಂಗ್ರೆಸ್ ನಾಯಕರು ನಮ್ಮ ಮೇಲೆ ವಿನಾಕಾರಣ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರ ವರ್ತನೆ ಹಾಗೂ ಜೆಡಿಎಸ್ ಒಡೆಯಲು ಮಾಡಿದ ಷಡ್ಯಂತ್ರದಿಂದ ಬಿಜೆಪಿಗೆ ಅಧಿಕಾರ ಸುಲಭವಾಗಿ ಸಿಕ್ಕಿತು ಕಾಂಗ್ರೆಸ್ ನಾಯಕರ ಮೇಲೆ ತೀವ್ರವಾಗಿ ಹರಿಹಾಯ್ದರು.

ರಾಜ್ಯದಲ್ಲಿ ಕೋಮುವಾದಿ ಶಕ್ತಿಗಳು ಅಧಿಕಾರಕ್ಕೆ ಬರದಂತೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದೆವು. ಆದರೆ ಕಾಂಗ್ರೆಸ್ ನ ಕೆಲ ಅಗ್ರಗಣ್ಯ ನಾಯಕರು ಹೊರ ರಾಜ್ಯದಲ್ಲಿ ಕುಳಿತುಕೊಂಡು ಸರ್ಕಾರ ಉರುಳಿವುದರ ಜೆತೆಗೆ ಜೆಡಿಎಸ್ ಮುಗಿಸಲು ಸಂಚು ರೂಪಿಸಿದರು ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಟೀಕಿಸಿದರು. ಇದನ್ನು ಅರಿತು ಅನಿವಾರ್ಯವಾಗಿ ಕೋಮುವಾದಿ ಹಣೆಪಟ್ಟಿ ಹೊತ್ತಿದ್ದ ಬಿಜೆಪಿ ಜತೆಗೆ ಸರ್ಕಾರ ರಚಿಸಬೇಕಾಯಿತು ಎಂದು ಸ್ಪಷ್ಟೀಕರಣ ನೀಡಿದರು. ನನ್ನ ತಂದೆಯ ಮಾತನ್ನು ದಿಕ್ಕರಿಸಿ ಬಿಜೆಪಿ ಜತೆ ಕೈಜೋಡಿಸಿದೆ. ಆರಂಭದಲ್ಲಿ ಆ ಪಕ್ಷ ಮತ್ತು ಮುಖಂಡರ ಮೇಲೆ ಅಪಾರ ಗೌರವವಿತ್ತು. ಆದರೆ ನನ್ನ ಸಹನೆ ಮತ್ತು ಒಳ್ಳೆಯತನವನ್ನು ಉಪಯೋಗಿಸಿಕೊಂಡು ನನ್ನ ಬೆನ್ನಿಗೆ ಚೂರಿ ಹಾಕಲು ಯತ್ನಿಸಿದರು ಎಂದು ಕುಮಾರಸ್ವಾಮಿ ವಿವರಿಸಿದರು.

ನಂತರ ಅವರ ಮಾತು ತಿರುಗಿದ್ದು ಬಿಜೆಪಿ ಸರ್ಕಾರದ ಕಡೆಗೆ, ಮುಖ್ಯಮಂತ್ರಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಕುಮಾರಸ್ವಾಮಿ, ಯಡಿಯೂರಪ್ಪ ದ್ವೇಷ ಮತ್ತು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಐದು ತಿಂಗಳಲ್ಲಿ ರಾಜ್ಯ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಿದೆ. ಅಪರೇಷನ್ ಕಮಲ ಅವರ ಸಾಧನೆಯಾಗಿದೆ. ವರ್ಗಾವಣೆ, ಮಠಮಾನ್ಯಗಳಿಗೆ ಹಣ ಹಂಚಿರುವುದು. ಈ ಮೂಲಕ ರಾಜ್ಯ ಸರ್ಕಾದ ಖಜಾನೆ ಮಾಡಿರುವುದೇ ಬಿಜೆಪಿ ಸರ್ಕಾರ ಸರ್ವೋನ್ನತ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದರು.

ಬಿಜೆಪಿ ಪರಿಹಾರ, ಜೆಡಿಎಸ್ ವಚನಭ್ರಷ್ಟಕ್ಕೆ ತಕ್ಕೆ ಪಾಠ ಕಲಿಸಿ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಈ ಐದು ತಿಂಗಳಲ್ಲಿ ಮಾಡಿದ್ದೇನು ಪ್ರಶ್ನಿಸಿದರು. ಆದ್ದರಿಂದ ಮುಂದಿನ ಚುವಾವಣೆಯಲ್ಲಿ ಬಿಜೆಪಿ ದುರಾಡಳಿತಕ್ಕೆ ನಿಮ್ಮ ಮತಗಳ ಮೂಲಕ ಸೂಕ್ತವಾಗಿ ಉತ್ತರಿಸಿ, ಬೂದಿಯಿಂದ ಎದ್ದು ಬರಲು ನನಗೆ ಶಕ್ತಿ ನೀಡಿ ಆರ್ಶೀವದಿಸಿ ಎಂದು ನೆರದಿದ್ದ ಜನಸ್ತೋಮಕ್ಕೆ ಮನವಿ ಮಾಡಿಕೊಂಡರು. ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಎರಡು ಲಕ್ಷಕ್ಕೊ ಅಧಿಕ ಜನರು ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X