ಲಕ್ನೋ : ಕೋರ್ಟ್ ಆವರಣದಲ್ಲಿ ಬಾಂಬ್ ಸ್ಪೋಟ
ಲಕ್ನೋ, ನ. 15 : ನ್ಯಾಯಮೂರ್ತಿಗಳ ಶೌಚಾಲಯದ ಪಕ್ಕದಲ್ಲಿ ಕಡಿಮೆ ಪ್ರಮಾಣದ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿರುವ ಘಟನೆ ಲಕ್ನೋ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ಮಧ್ಯಾಹ್ನ ಜರುಗಿದೆ. ಸ್ಫೋಟ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದೇ ಕೂಡಾ ಕಚ್ಚಾ ಬಾಂಬ್ ಶುಕ್ರವಾರ ಮಧ್ಯಾಹ್ನ ಕೂಡಾ ಸ್ಫೋಟಗೊಂಡಿತ್ತು. ಹೆಚ್ಚುವರಿ ನ್ಯಾಯಾಧೀಶರ ಶೌಚಾಲಯದ ಬಲಿ ಈ ಸ್ಫೋಟ ಜರುಗಿದೆ. ಪಟಾಕಿ ತರಹದ ಸಮಾಗ್ರಿ ಬಳಿಸಿ ಬಾಂಬ್ ತಯಾರಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ತಿಳಿಸಿದ್ದಾರೆ. ಶುಕ್ರವಾರ ನೋಯಿಡಾದಲ್ಲಿ ಕಸ ತೊಟ್ಟಿಯಲ್ಲಿ ಕೂಡಾ ಇದೇ ರೀತಿಯ ಕಚ್ಚಾ ವಸ್ತು ಬಳಿಸಿ ತಯಾರಿಸಲಾದ ಬಾಂಬ್ ಸ್ಫೋಟಗೊಂಡಿತ್ತು. ಅದರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದವರನ್ನು ನೋಯಿಡಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications