ಮಾಜಿ ಸಚಿವ ಅಜಿತ್ ಪಾಂಜಾ ನಿಧನ

ajith panja
ಕೊಲ್ಕತ್ತಾ, ನ. 14 : ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತೃಣಮೂಲ ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಅಜಿತ್ ಪಾ೦ಜಾ ಇಂದು ಬೆಳಿಗ್ಗೆ ಕೋಲ್ಕತ್ತಾ ದಲ್ಲಿ ನಿಧನ ಹೊಂದಿದರು. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಕೆಲ ವರ್ಷಗಳಿಂದ ಬಾಯಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಜಿತ್ ಪಾಂಜಾ ಅಪಾರ ಬಂದುಬಳಗ, ಅಭಿಮಾನಿಗಳನ್ನು ವರ್ಗವನ್ನು ಅಗಲಿದ್ದಾರೆ. ಕಳೆದ ಅ. 25 ರಂದು ಕೊಲ್ಕತ್ತಾ ಹೊರವಲಯದ ಪೀರ್ ಲೇಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಬುಧವಾರ ಆವರ ದೇಹಸ್ಥಿತಿ ಚಿಂತಾಜನಕವಾಗಿದ್ದರಿಂದ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ದೃಡಪಡಿಸಿವೆ.

ಪಶ್ಚಿಮ ಬಂಗಾಲ ವಿಧಾನಸಭೆಯ ಸದಸ್ಯರಾಗಿದ್ದ ಪಾ೦ಜಾ, 1984 ರಲ್ಲಿ ಕಾ೦ಗ್ರೆಸ ಪಕ್ಷದಿಂದ ಲೋಕಸಭೆಗೆ ಆಯ್ಕೆ ಆಗಿದ್ದರು. 2001 ರಲ್ಲಿ ತೃಣಮೂಲ ಕಾಂಗ್ರೆಸ್ಸ್ ಪಕ್ಷ ವನ್ನು ಸೇರಿಕೊಂಡಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+