ವಿದ್ಯುತ್ ಚೋರರಿಗೆ ಕೆಪಿಟಿಸಿಎಲ್ ಭಾರಿ ದಂಡ
ಬೆಂಗಳೂರು, ಅ.25: ವಿದ್ಯುತ್ ಕಳ್ಳತನದಲ್ಲಿ ನಿರತವಾಗಿದ್ದ ರಾಜ್ಯದ 21 ಕಂಪನಿಗಳ ಮೇಲೆ ಕರ್ನಾಟಕ ವಿದ್ಯುತ್ ಸರಬರಾಜು ನಿಯಮಿತ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳು(ಎಸ್ಕಾಮ್ಸ್) ಜಂಟಿಯಾಗಿ ದಾಳಿ ಮಾಡಿ ರು.70 ಲಕ್ಷಕ್ಕೂ ಅಧಿಕ ದಂಡ ವಿಧಿಸಲಾಗಿದೆ.
ವಿದ್ಯುತ್ ಕಳ್ಳತನದಲ್ಲಿ ನಿರತವಾಗಿದ್ದ ಬೆಳಗಾವಿಯ ಸ್ಟೀಲ್ ರೋಲಿಂಗ್ ಮಿಲ್ ಗೆಅತ್ಯಧಿಕ ರು. 40 ಲಕ್ಷಗಳಷ್ಟು ದಂಡ ವಿಧಿಸಲಾಗಿದೆ. ಹಾಗೆಯೇ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕೆಪಿಟಿಸಿಎಲ್ ಹಾಗೂ ಎಸ್ಕಾಮ್ ಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.
ನಿಯಮ ರಹಿತವಾಗಿ ವಿದ್ಯುತ್ ಬಳಸುತ್ತಿದ್ದ ಕಾರಣ,ಮೈಸೂರಿನ ಫ್ಲಷ್ ಡೋರ್ ಉತ್ಪಾದನಾ ಘಟಕ ಹಾಗೂ ಕಟ್ಟಡ ನಿರ್ಮಾಣ ಕಂಪನಿಗಳ ಮೇಲೆ ದಾಳಿ ಮಾಡಿ ಕ್ರಮವಾಗಿ ರು.4,83 718 ಹಾಗೂ ರು. 2,85 800ಗಳಷ್ಟು ದಂಡ ವಸೂಲಿ ಮಾಡಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications