ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಯಾನ : ಪಿಎಸ್ಎಲ್ವಿ ಬಾನಂಗಳಕ್ಕೆ ಜಿಗಿದ ಆಕ್ಷಣ

By Staff
|
Google Oneindia Kannada News

ಶ್ರೀಹರಿಕೋಟ, ಅ. 23 : ಭಾರತೀಯ ಅಂತರಿಕ್ಷ ಸಂಶೋಧನಾ ಕೇಂದ್ರ ನಿರ್ಮಿಸಿದ ಪೋಲಾರ್ ಲಾಂಚ್ ಸೆಟಲೈಟ್ ವೆಹಿಕಲ್ ಸಿ-11 ಭಾರತದ ಮೊಟ್ಟಮೊದಲ ಮಾನವರಹಿತ ಚಂದ್ರಯಾನ ಅಭಿಯಾನವನ್ನು ಬುಧವಾರ ಯಶಸ್ವಿಯಾಗಿ ಪ್ರಾರಂಭಿಸಿದೆ. ಇಲ್ಲಿನ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಪಿಎಸ್ಎಲ್‌ವಿ ಬಾನಂಗಳಕ್ಕೆ ಹಾರಿದ ಆ ಕ್ಷಣ ಯಶಸ್ವಿ ಉಡಾವಣೆಯನ್ನು ಸಾಕಾರಗೊಳಿಸಿದ ವಿಜ್ಞಾನಿಗಳ ಮೊಗದಲ್ಲಿ ಏನೋ ಸಾಧಿಸಿದ ಸಂತೃಪ್ತಿ, ಮಾತೇ ಹೊರಡದಂಥ ಸ್ಥಿತಿ.

ತಮ್ಮ ಸಂತೋಷವನ್ನು ಹಂಚಿಕೊಂಡ ಇಸ್ರೋದ ಮುಖ್ಯಸ್ಥ ಮಾಧವನ್ ನಾಯರ್, ಅಂತರಿಕ್ಷನೌಕೆ ಅತ್ಯಂತ ಯಶಸ್ವಿಯಾಗಿ ದೋಷವಿಲ್ಲದೆ ಉಡಾವಣೆಗೊಂಡಿದೆ. ಯಾವುದೇ ತಾಂತ್ರಿಕ ಅಡಚಣೆ ಬರದಿದ್ದರೆ ನಿಗದಿತ ಸಮಯದಂದು ಚಂದ್ರನನ್ನು ತಲುಪಿ ಎರಡು ವರ್ಷಗಳ ಕಾಲ ಚಂದ್ರನನ್ನು ಪ್ರದಕ್ಷಿಣೆ ಹಾಕಿ ಅಲ್ಲಿ ಲೋಹದ ಅಸ್ತಿತ್ವದ ಬಗ್ಗೆ ಮಾಹಿತಿ ನೀಡಲಿದೆ ಎಂದಿದ್ದಾರ,ೆ. ಚಂದ್ರಯಾನ ಮಾಡುವ ಭಾರತೀಯರ ಕನಸು ಅಂತೂ ಸಾಕಾರಗೊಂಡಿದೆ. ತಾನೊಂದು ಸಮರ್ಥ ರಾಷ್ಟ್ರ ಎಂದು ಇಡೀ ಜಗತ್ತಿದೆ ಸಾರಿದೆ.

ಪೂರಕ ಓದಿಗೆ
ನನಸಾದ ಭಾರತದ ಚಂದ್ರಯಾನದ ಕನಸು
ಚಂದ್ರಯಾನ ಯೋಜನೆಯಲ್ಲಿ ಕನ್ನಡಿಗರ ಪಾತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X