ಸಿಬ್ಬಂದಿ ಕಡಿತಕ್ಕೆ ಮುಂದಾದ ಯಾಹೂ, ಗೂಗಲ್

ಲಾಸ್ ಏಂಜಲ್ಸ್, ಅ.20: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಿಸಿ ಅಂತರ್ಜಾಲ ಸೇವೆಗಳ ದೈತ್ಯ ಕಂಪನಿ ಯಾಹೂಗೂ ತಟ್ಟಿದ್ದು ಅದು ಸಹ ಸಿಬ್ಬಂದಿ ಕಡಿತಕ್ಕೆ ಕೈಹಾಕಿದೆ. ಮುಂದಿನ ವಾರ ಯಾಹೂ ಕಂಪನಿ ತನ್ನ ಮೂರನೆ ತ್ರೈಮಾಸಿಕ ವರದಿಯನ್ನು ಪ್ರಕಟಿಸಲಿದ್ದು ಒಂದಷ್ಟು ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾಹೂ ಸಂಸ್ಥೆಯಲ್ಲಿ ಪ್ರಸ್ತುತ 14,300 ಮಂದಿ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಯಾಹೂ ಅಂತರ್ಜಾಲ ದೈತ್ಯ ಜನವರಿಯಲ್ಲಿ ಮನೆಗೆ ಕಳುಹಿಸಿದಂತೆ ಈಗ ಮತ್ತಷ್ಟು ನೌಕರರನ್ನು ಮನೆಗೆ ಕಳುಹಿಸಲಿದೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಜನವರಿಯಲ್ಲಿ 1,000 ನೌಕರರನ್ನ್ನು ಯಾಹೂ ಮನೆಗೆ ಕಳುಹಿಸಿತ್ತು.

ಪ್ರಮುಖ ಆನ್ ಲೈನ್ ಹರಾಜು ಮತ್ತು ಮಾರಾಟ ತಾಣ eBay ಸಹ ತನ್ನ 16,000 ನೌಕರರಲ್ಲಿ ಶೇ.10ರಷ್ಟು ಮಂದಿಯನ್ನು ಅಕ್ಟೋಬರ್ ತಿಂಗಳಲ್ಲಿ ನೌಕರಿಯಿಂದ ತೆಗೆಯುತ್ತಿರುವುದಾಗಿ ಪ್ರಕಟಿಸಿದೆ. ಹಾಗೆಯೇ ಗೂಗಲ್ ಸರ್ಚ್ ಎಂಜಿನ್ ಗುತ್ತಿಗೆದಾರರ ಸಂಖ್ಯೆಯನ್ನು ಕಡಿತಗೊಳಿಸಲಿದೆ. ಗೂಗಲ್ ನಲ್ಲಿ ಒಟ್ಟು 30,000 ಮಂದಿ ನೌಕರರ ವರ್ಗ ಇದ್ದು ಅದರಲ್ಲಿ 10,000 ಮಂದಿ ಗುತ್ತಿಗೆದಾರರು. ಎಷ್ಟು ಮಂದಿ ಗುತ್ತಿಗೆದಾರರನ್ನು ಮನೆಗೆ ಕಳುಹಿಸಲಾತ್ತದೆ ಎಂಬ ಮಾಹಿತಿಯನ್ನು ಗೂಗಲ್ ಬಹಿರಂಗ ಪಡಿಸಿಲ್ಲ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಇಂಟರ್ನೆಟ್ ಕಂಪನಿಗಳ ಮೇಲೆ ಉಂಟಾಗಿದ್ದು ಅವು ಆರ್ಥಿಕ ಬಿಕ್ಕಟ್ಟನ್ನು ತಡೆದುಕೊಳ್ಳಲು ಸಿಬ್ಬಂದಿ ಕಡಿತಕ್ಕೆ ಕೈಹಾಕಿವೆ ಉದ್ಯಮ ಪಂಡಿತರು ವಿಶ್ಲೇಷಿಸಿದ್ದಾರೆ.

(ಏಜೆನ್ಸೀಸ್)
ಕಿಂಗ್ ಫಿಶರ್ ಟ್ರೈನಿ ಪೈಲೆಟ್ ಗಳ ಸಂಬಳಕ್ಕೆ ಕತ್ತರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+