ಗುಜರಾತ್ ಗೂಡಿಗೆ ನ್ಯಾನೋ ನಿಶ್ಚಿತ

nano car says bye to ktakaಅಹಮದಾಬಾದ್, ಅ. 7 : ತೀವ್ರ ಕುತೂಹಲ ಕೆರಳಿಸಿದ್ದ ಟಾಟಾ ಕಂಪನಿಯ ಮಹತ್ವಾಕಾಂಕ್ಷೆಯ ಕನಸಿನ ಕೂಸು 'ಟಾಟಾ ನ್ಯಾನೋ' ಕಾರು ಘಟಕ ಗುಜರಾತ್ ಪಾಲಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಟಾಟಾ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಘೋಷಿಸಿದರು.

ಅಹಮದಾಬಾದ್ ನಗರದ ಹೊಲವಲಯ ಸನಂದಾ ಪ್ರದೇಶದಲ್ಲಿ ನ್ಯಾನೋ ಕಾರು ಘಟಕವನ್ನು ಸ್ಥಾಪಿಸಲು ಟಾಟಾ ಸಂಸ್ಥೆ ನಿರ್ಧರಿಸಿದೆ. ಟಾಟಾ ಸಂಸ್ಥೆಗೆ ಘಟಕಕ್ಕೆ ಬೇಕಿರುವ ಎಲ್ಲ ಅಗತ್ಯ ಸೌಲಭ್ಯಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೀಡಲು ಮುಂದೆ ಬಂದಿದೆ. ಹಾಗೂ ರಸ್ತೆಗಳ ಗುಣಮಟ್ಟ ಅಭಿವೃದ್ಧಿಪಡಿಸಲು ಆಧ್ಯತೆ ನೀಡಲಾಗುವುದು. ಟಾಟಾ ಕಂಪನಿ ಆಗಮನದಿಂದ ರಾಜ್ಯ ಮತ್ತಷ್ಟು ಶಕ್ತಿಯುತವಾಗಿ ರೂಪಗೊಳ್ಳಲಿದೆ. ಉದ್ಯೋಗ ಸೃಷ್ಟಿಯಾಗಲಿದೆ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.

ಟಾಟಾ ಕಂಪನಿಯ ಮಹತ್ವಾಕಾಂಕ್ಷೆ ಘಟಕಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. ವರ್ಷಕ್ಕೆ 2.5 ಲಕ್ಷ ನ್ಯಾನೋ ಕಾರು ಉತ್ಪಾದಿಸುವ ಗುರಿ ಹೊಂದಲಾಗಿದೆ. ಗುಜರಾತ್ ಅಬಿವೃದ್ಧಿಗೆ ಟಾಟಾ ಕಂಪನಿಯ ಮಹತ್ವದ ಕೂಡುಗೆ ನೀಡಲಿದೆ ಎಂದು ನನ್ನ ಭಾವನೆಯಾಗಿದೆ. ಗುಜರಾತಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ರತನ್ ಟಾಟಾ ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ಪೂರಕ ಓದಿಗೆ:
ಮೋದಿಗೆ ಒಲಿದ ಟಾಟಾ ನ್ಯಾನೋ ಘಟಕ
ಧಾರವಾಡದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಟಾಟಾ
ಸಿಂಗೂರಿಗೆ ಅಧಿಕೃತವಾಗಿ 'ಟಾಟಾ' ಹೇಳಿದ ಟಾಟಾ
ನ್ಯಾನೋ ಘಟಕಕ್ಕೆ ರತ್ನಗಂಬಳಿಯ ಆಹ್ವಾನ
ಧಾರವಾಡಕ್ಕೆ ಟಾಟಾ ಮಾರ್ಕೋಪೊಲೋ ಬಸ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+