ಜಯಪ್ರದಾ ಜ್ಯುವೆಲ್ಸ್ ಆಫ್ ಇಂಡಿಯಾ ರಾಯಭಾರಿ

ಬೆಂಗಳೂರು, ಸೆ. 25 : ದೇಶದ ಖ್ಯಾತ ಆಭರಣ ಮಳಿಗೆ ಜ್ಯುವೆಲ್ಸ್ ಆಫ್ ಇಂಡಿಯಾ ತನ್ನ 10ನೇ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಆಕ್ಟೋಬರ್ 18ರಿಂದ 21ರವರೆಗೆ ಹಮ್ಮಿಕೊಳ್ಳಲಿದ್ದು, ಅದಕ್ಕಾಗಿ ನಟಿ ಹಾಗೂ ರಾಜಕಾರಣಿ ಜಯಪ್ರದ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಿಕೊಂಡಿದೆ. ಕನ್ನಡದ ನಟಿ ಮಿನಲ್ ಪಟೇಲ್ ಸಹ ಪ್ರದರ್ಶನಕ್ಕೆ ರಂಗು ತುಂಬಲಿದ್ದಾರೆ.
ಜ್ಯುವೆಲ್ಸ್ ಆಫ್ ಇಂಡಿಯಾಗೆ ರಾಯಭಾರಿಯಾಗಿದ್ದಕ್ಕೆ ಸಂಸತ ವ್ಯಕ್ತಪಡಿಸಿದ ಜಯಪ್ರದಾ ಅವರು, ನನ್ನ ನೆಚ್ಚಿನ ನಗರವಾದ ಬೆಂಗಳೂರಿನಲ್ಲಿ ಈ ಪ್ರದರ್ಶನವನ್ನು ಹಮ್ಮಿಕೊಳ್ಳುವುದು ಇನ್ನಷ್ಟು ಸಂತಸ ತಂದಿದೆ. ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ಕರ್ನಾಟಕದ ಜನತೆ ನನಗೆ ಪ್ರೀತಿ ಮತ್ತು ಪ್ರೋತ್ಸಾಹವನ್ನು ಎಂದಿಗೂ ಧಾರೆಯೆರೆದಿದ್ದಾರೆ ಎಂದರು.
ಜ್ಯುವೆಲ್ಸ್ ಆಫ್ ಇಂಡಿಯಾ ಜೊತೆಗೆ ಸಹಭಾಗಿತ್ವ ಹೊಂದಿರುವ ಪ್ಯಾರಿಸ್ ಪ್ರಣಯ ಖ್ಯಾತಿಯ ಕನ್ನಡದ ತಾರೆ ಹಾಗೂ ಡಿಸೈನರ್ ಮಿನಲ್ ಪಟೇಲ್, ನಾನು ಎಲ್ಲಾ ರೀತಿಯ ಕಲೆಯನ್ನು ಗೌರವಿಸಿಸುತ್ತೇನೆ. ಆಭರಣಗಳು ಸಹ ಸಂಕ್ಷಿಪ್ತ ಪ್ರಮಾಣದಲ್ಲಿ ಕಲೆಯನ್ನು ಬಿಂಬಿಸುತ್ತದೆ. ಆದ್ದರಿಂದ ಜ್ಯುವೆಲ್ಸ್ ಆಫ್ ಇಂಡಿಯಾ ಜೊತೆ ಸೇರಲು ರೋಮಂಚನವಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಪ್ರದರ್ಶನಕ್ಕಾಗಿ ಇದೇ ಮೊದಲ ಬಾರಿಗೆ ಮದುವೆ ಸಮಾರಂಭಗಳಿಗೆ ಬಳಸುವ ವಿನೂತನ ಮಾದರಿಯ ಭಾರತೀಯ ಆಭರಣಗಳನ್ನು ಜ್ಯುವೆಲ್ಸ್ ಆಫ್ ಇಂಡಿಯಾ ತರಲಿದೆ ಎಂದು ಸಂಚಾಲಕ ಸಂದೀಪ್ ಬೇಕಾಲ್ ಹೇಳಿದರು. ಸುಂದರ ನಟಿ ಜಯಪ್ರದಾ ಭಾರತೀಯ ಸಂಸ್ಕೃತಿಯ ಪ್ರತಿಬಿಂಬದಂತಿದ್ದು, ತಕ್ಕ ರಾಯಭಾರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ಈ ಪ್ರದರ್ಶನ ಮದುವೆ ಸೀಸನ್ ಮತ್ತು ದೀಪಾವಳಿಗಿಂತ ಮೊದಲು ಇರುವುದರಿಂದ ಆಭರಣ ಕೊಳ್ಳಲು ಸಕಾಲವಾಗಿರುತ್ತದೆ ಎಂದು ನುಡಿದರು.
ಜೈಪುರದ ಕ್ಲಾಸಿಕ್ ಕುಂದಾನ್ ಮತ್ತು ಮೀನಕರಿ, ತಮಿಳುನಾಡಿನ ಎವರ್‌ಲಾಸ್ಟಿಂಗ್ ಟೆಂಪಲ್ ಮತ್ತು ಆಂಟಿಕ್ ಜ್ಯುವೆಲ್ಲರಿ, ರಾಜಸ್ಥಾನದ ಎಕ್ಸೊಟಿಕ್ ತೆವಾ, ಮುಂಬೈ ಮತ್ತು ಪಾಂಡಿಚೇರಿಯ ಡಿಸೈನರ್‌ವೆರ್ ಮತ್ತು ಬ್ರ್ಯಾಂಡೆಡ್ ಜ್ಯುವೆಲ್ಲರಿ, ಕೊಲ್ಕತ್ತಾದ ಹ್ಯಾಂಡ್‌ಕ್ರಾಪ್ಟಡ್ ಗೋಲ್ಡ್ ಜ್ಯುವೆಲ್ಲರಿ, ಮಧುಮಗಳು ಬಳಸುವ ಆಭರಣಗಳು, ಬಳೆ ಮುಂತಾದ ಇತರೆ ಅಭರಣಗಳನ್ನು ಪ್ರದರ್ಶನದಲ್ಲಿ ಕಾಣಬಹುದು.
ಇದೇ ಮೊದಲ ಬಾರಿ ದೇಶದ ಪ್ರಮುಖ ಆಭರಣ ಮಳಿಗೆಗಳಾದ ಬೆಂಗಳೂರಿನ ಪ್ರತಿಭಾ ಜ್ಯುವೆಲ್ಲರಿ ಮತ್ತು ಪಂಚ್ ಕೇಸರಿ, ಜೈಪುರಿನ ಅಮ್ರಾಪಲಿ, ಪಾಂಡಿಚೇರಿಯ ವೈಟ್ ಫೈರ್ ಡೈಮಂಡ್ಸ್, ಕೊಲ್ಕತ್ತಾದ ಸಿಂದಾರ್ ಜೆಮ್ಸ್ ಜ್ಯುವೆಲ್ಸ್ ಆಫ್ ಇಂಡಿಯಾ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications