ವಕ್ಫ್ ಸಮಿತಿಗೆ ಮಹಿಳೆ ನೇಮಕ : ಸಚಿವರಿಗೆ ಬೆದರಿಕೆ

ಬೆಂಗಳೂರು, ಸೆ. 18 : ವಕ್ಫ್ ಸಮಿತಿಗೆ ಸರ್ಕಾರ ಇತ್ತೀಚೆಗೆ ಮುಸ್ಲಿಂ ಮಹಿಳೆಯೊಬ್ಬರನ್ನು ನೇಮಿಸಿದ ಹಿನ್ನೆಲೆಯಲ್ಲಿ ತಮಗೆ ಬೆದರಿಕೆ ಪತ್ರ ಬಂದಿದೆ ಎಂದು ವಕ್ಫ್ ಸಚಿವ ಮಮ್ತಾಜ್ ಅಲಿ ಖಾನ್ ಬುಧವಾರ ತಿಳಿಸಿದ್ದಾರೆ.

ವಕ್ಫ್ ಸಮಿತಿಗೆ ಇತ್ತೀಚೆಗೆ ಸೀಮಾ ಮೂಹಸಿನ್ ಅವರನ್ನು ನೇಮಕ ಮಾಡಲಾಗಿದೆ. ಅವರು ಸ್ನಾತಕೋತ್ತರ ಪದವೀಧರೆಯಾಗಿದ್ದರಿಂದ ಅವರನ್ನು ನೇಮಿಸಲಾಗಿದೆ. ಇದನ್ನು ವಿರೋಧಿಸಿ ಮುಸ್ಲಿಂ ಸಮುದಾಯದಿಂದಲೇ ಪತ್ರ ಬಂದಿದೆ. ಆದರೆ ಇಂತಹ ಪತ್ರಗಳಿಗೆ ತಾವು ಬಗ್ಗುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಎಚ್ಚರಿಸಿದ್ದಾರೆ.

ಜಿಲ್ಲಾ ವಕ್ಫ್ ಸಮಿತಿಗಳ ಪುರನ್ ರಚನೆಯೂ ಶೀಘ್ರದಲ್ಲಿ ನಡೆಯುತ್ತದೆ ಎಂದ ಸಚಿವರು, ಈ ಹಿಂದೆ ಸಮಿತಿಯಲ್ಲಿದ್ದ ಸದಸ್ಯರ ಒಳಜಗಳ, ಸ್ವಾರ್ಥದಿಂದ ಸಮುದಾಯದ ಪ್ರಗತಿಗೆ ಚಿಂತನೆ ನಡೆದಿಲ್ಲ ಎಂದು ಅವರು ಆರೋಪಿಸಿದರು. ವಕ್ಫ್ ಇಲಾಖೆಗೆ ಸೇರಿದ ಒಂದು ಸಾವಿರ ಕೋಟಿ ಮೌಲ್ಯದ 135 ಆಸ್ತಿಗಳು ಅತಿಕ್ರಮಣವಾಗಿದೆ. ರಾಜ್ಯದಲ್ಲಿ ಇಲಾಖೆಗೆ ಸೇರಿದ ಒಟ್ಟು 32,224 ಅಸ್ತಿ ಇವೆ. ಅತಿಕ್ರಮಣ ತಡೆಯಲು ವಿಶೇಷ ಕಾರ್ಯ ಪಡೆ ರಚಿಸಲಾಗುವುದು ಎಂದು ಸಚಿವರು ತಿಳಿಸಿದರು.

ವಕ್ಫ್ ಸಮಿತಿಗೆ ಹಾಲಿ ಇರುವ ಸಚಿವರ ಅಧ್ಯಕ್ಷತೆಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ. ಕೆ.ವಿ.ರಾಜು ಹಾಗೂ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಿ.ತಂಗಂರಾಜು ಅವರನ್ನು ಆಹ್ವಾನಿತರನ್ನಾಗಿ ನೇಮಿಸಲಾಗಿದೆ ಎಂದು ಮಮ್ತಾಜ್ ಅಲಿ ಖಾನ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+