ನೂರು ಕೋಟಿ ತಲುಪಲಿರುವ ಮೊಬೈಲ್ ಗ್ರಾಹಕರು

ನವದೆಹಲಿ, ಸೆ.18:ರಿಲಯನ್ಸ್ ಟೆಲಿಕಾಂ ಹೊರತುಪಡಿಸಿ ಭಾರತದಲ್ಲಿ ಜಿಎಸ್ ಎಂ ಸೆಲ್ ಫೋನ್ ಬಳಕೆದಾರರ ಸಂಖ್ಯೆ 2012ರ ವೇಳೆಗೆ 750 ದಶಲಕ್ಷಕ್ಕೆ ತಲುಪಲಿದೆ. 2015ರ ವೇಳೆಗೆ ಒಂದು ಶತಕೋಟಿ ಗ್ರಾಹಕರು ಸೆಲ್ ಫೋನ್ ಸೌಲಭ್ಯ ಪಡೆಯಲಿದ್ದಾರೆ ಎಂದು ಭಾರತದ ಸೆಲ್ ಫೋನ್ ಆಪರೇಟರ್ ಗಳ ಸಂಸ್ಥೆಯ ಜಿಎಸ್ ಎಂ ಘಟಕ ತಿಳಿಸಿದೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಂಸ್ಥೆಯ ಪ್ರಧಾನ ನಿರ್ದೇಶಕ ಟಿ.ವಿ.ರಾಮಚಂದ್ರನ್, ಆಸಸ್ಟ್ 2008ರ ವೇಳೆಗೆ ಭಾರತದ ಸೆಲ್ ಫೋನ್ ಬಳಕೆದಾರರ ಸಂಖ್ಯೆ 300 ದಶಲಕ್ಷದಷ್ಟಾಗಲಿದೆ. 1995ರಲ್ಲಿ ಸ್ಥಾಪನೆಯಾದ ಈ ಸಂಸ್ಥೆ ಸೆಲ್ ಫೋನ್ ಸೇವೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಶ್ರಮಿಸುತ್ತಿದೆ. ವಿಶ್ವದರ್ಜೆಯ ಮೂಲ ಸೌಲಭ್ಯಗಳನ್ನು ಒದಗಿಸಲು ಹಾಗೂ ಭಾರತದಲ್ಲಿ ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಸೆಲ್ ಫೋನ್ ಸೇವೆ ದೊರೆಯುವಂತೆ ಮಾಡುವ ಮುಖ್ಯ ಗುರಿಯನ್ನು ಹೊಂದಿದೆ.

ಭಾರತಿ ಏರ್ ಟೆಲ್ ಗ್ರಾಹಕರ ಸಂಖ್ಯೆ 74.7 ದಶಲಕ್ಷದಷ್ಟಿದ್ದು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ದ್ವಿತೀಯ ಸ್ಥಾನವನ್ನು ವೋಡೋ ಫೋನ್ ಎಸ್ಸಾರ್ ಆಕ್ರಮಿಸಿದ್ದು ಅದರ ಗ್ರಾಹಕರ ಸಂಖ್ಯೆ 52.75 ದಶಲಕ್ಷದಷ್ಟಿದೆ. ತೃತೀಯ ಸ್ಥಾನದಲ್ಲಿ ಬಿಎಸ್ ಎನ್ ಎಲ್ ಇದ್ದು ಅದರ ಗ್ರಾಹಕರ ಸಂಖ್ಯೆ 38.48 ದಶಲಕ್ಷದಷ್ಟಿದೆ. ನಂತರದ ಸ್ಥಾನದಲ್ಲಿ ಐಡಿಯಾ ಹಾಗೂ ಏರ್ ಸೆಲ್ ಸಂಸ್ಥೆಗಳಿವೆ ಎಂದು ಭಾರತದ ಸೆಲ್ಯುಲರ್ ಆಪರೇಟರ್ ಗಳ ಸಂಸ್ಥೆ ತಿಳಿಸಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+