ಚೂರುಪಾರು: ಸಿನಿಮಾ ಕಥಾ ಸ್ಪರ್ಧೆ, ವ್ಯಾಟ್ ತರಬೇತಿ

ಸಿನಿಮಾ ಕಥಾ ಸ್ಪರ್ಧೆ
ಮೇಘ ಗ್ರಾಮೀಣ ಅಭಿವೃದ್ಧಿ ಸಮಾಜ, ಚಲನಚಿತ್ರ ತಂತ್ರಜ್ಞಾನ ಸಂಸ್ಥೆಯ ಸಹಯೋಗದಲ್ಲಿ ರಾಜ್ಯ ಮಟ್ಟದ ಚಲನಚಿತ್ರ ಕಥಾ ಸ್ಪರ್ಧೆಯನ್ನು ಅಯೋಜಿಸಲಾಗಿದೆ. ಆಸಕ್ತರು ಕಥೆಯನ್ನು ಕಾರ್ಯದರ್ಶಿ ಮೇಘ ಗ್ರಾಮೀಣ ಅಭಿವೃದ್ಧಿ ಸಮಾಜ, ನಂ. 371/29, ಸೆಂಟ್ ಜೋಸೆಫ್ ಕಾನ್ವೆಂಟ್ ಹಿಂಭಾಗ, ಸುಣ್ಣಕಲ್ಲು ರಸ್ತೆ, ಚಿಕ್ಕಬಳ್ಳಾಪುರ ವಿಳಾಸವನ್ನು ಸಂಪರ್ಕಿಸಬಹುದು. ದೂ. 97408 01167


ವ್ಯಾಟ್ ತರಬೇತಿ
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ವ್ಯಾಟ್ ಹಾಗೂ ಇನ್ನಿತರ ವಾಣಿಜ್ಯ ತೆರಿಗೆಗಳ ಕುರಿತು ತರಬೇತಿ ಕಾರ್ಯಕ್ರಮವನ್ನು ಸೆ. 23 ರಂದು ಮಧ್ಯಾಹ್ನ 3 ಗಂಟೆಗೆ ಕೆ.ಜಿ. ರಸ್ತೆಯ ಎಫ್ ಕೆಸಿಸಿಐ ಕ್ಯಾಬಿನೆಟ್ ಹಾಲ್ ನಲ್ಲಿ ಏರ್ಪಡಿಸಿದೆ. ಆಸಕ್ತರು http://www.fkcci.org ತಾಣವನ್ನು ವೀಕ್ಷಿಸಬಹುದು.
ದೂ. 080-2226 2355/56 ಸಂಖ್ಯೆಯನ್ನು ಸಂಪರ್ಕಿಸಬಹುದು.

ಪಿಯು ಪರೀಕ್ಷಾ ಶುಲ್ಕ ಅವಧಿ ವಿಸ್ತರಣೆ
ಅನುತ್ತೀರ್ಣ ವಿದ್ಯಾರ್ಥಿಗಳು 2009 ರ ಮಾರ್ಚ್ ನಲ್ಲಿ ನಡೆಯಲಿರುವ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪರೀಕ್ಷಾ ಶುಲ್ಕ ಕಟ್ಟಲು ಸೆ. 25ರವರೆಗೆ ಅವಧಿ ವಿಸ್ತರಿಸಲಾಗಿದೆ.
ಪರೀಕ್ಷಾ ಶುಲ್ಕ ಮತ್ತು ದಂಡ ಶುಲ್ಕ 300 ರು. ಜೊತೆಗೆ ವಿಶೇಷ ದಂಡ ಶುಲ್ಕ 200 ರು ಪಾವತಿಸಬೇಕು.ಸೆ. 27 ರೊಳಗೆ ಆಯಾ ಕಾಲೇಜಿನ ಪ್ರಾಂಶುಪಾಲರು ಪಪೂ ಶಿಕ್ಷಣ ಇಲಾಖೆಗೆ ಶುಲ್ಕಗಳನ್ನು ಸಲ್ಲಿಸುತ್ತಾರೆ. ಯಾವುದೇ ಕಾರಣಕ್ಕೂ ಶುಲ್ಕ ಪಾವತಿ ದಿನಾಂಕವನ್ನು ಪುನಃ ವಿಸ್ತರಿಸಲಾಗುವುದಿಲ್ಲ ಎಂದು ಇಲಾಖೆ ಆಯುಕ್ತ ಎಸ್ .ಜಿ. ಹೆಗಡೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+